Advertisement

ಪಡುಬಿದ್ರಿ: ರಾ.ಹೆದ್ದಾರಿ 66ರ ಬಳಿ ಸರಣಿ ಅಪಘಾತ

10:14 PM Oct 13, 2022 | Team Udayavani |

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದ ಹನಾಫಿ ಮಸೀದಿ ಬಳಿ, ಸರಣಿ ಅಪಘಾತದಿಂದ ವಾಹನಗಳು ಜಖಂಗೊಂಡಿದ್ದು ಕೆಲ ಮಂದಿ ಗಾಯಗೊಂಡಿರುವ ಘಟನೆಯು ಗುರುವಾರ ರಾತ್ರಿ ನಡೆದಿದೆ.

Advertisement

ಸ್ಕಾರ್ಪಿಯೋ ವಾಹನ ಚಾಲಕನು ಅತೀವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಉಡುಪಿಯತ್ತ ಸಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರ್ಮಾಳು ಬಳಿ ವಿರುದ್ಧ ದಿಕ್ಕು ಮತ್ತು ಡಿವೈಡರ್‌ ಬಳಿ ಎರಡು ಬೆ„ಕ್‌ಗಳಿಗೆ ಢಿಕ್ಕಿ ಹೊಡೆದು, ನಿಲ್ಲಿಸದೆ ಉಡುಪಿಯತ್ತ ಅತಿವೇಗದಿಂದ ತೆರಳುತ್ತಿದ್ದ.  ಉಚ್ಚಿಲ ಪೇಟೆಯನ್ನು ದಾಟಿದ ಬಳಿಕ  ಹನಾಫಿ ಮಸೀದಿಯ ಬಳಿ ಎರ್ಟಿಗಾ ಕಾರು, ಬೆ„ಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದೆ.

ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು  ಹೆದ್ದಾರಿ ವಿಭಾಜಕವನ್ನು ಏರಿ ದಾಟಿ ಹೋಗಿದ್ದು, ಮಂಗಳೂರಿನತ್ತ ತೆರಳುವ ರಾ.ಹೆದ್ದಾರಿಯ ಪಥದತ್ತ ಮುಖ ಮಾಡಿ ನಿಂತಿದೆ. ಸ್ಕೂಟಿ ಸವಾರ ಸ್ಥಳೀಯ ಸೈಕಲ್‌ ಅಂಗಡಿ ಮಾಲಕ ಸಹಿತ ಕಾರಿನಲ್ಲಿದ್ದ ಕೆಲ ಮಂದಿ ಗಾಯಗೊಂಡಿದ್ದು  ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆಯ ಸಂದರ್ಭ ರಾ.ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಸ್ಥಳೀಯರು ಮತ್ತು ಪೋಲೀಸರು  ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ

ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಪಿ.ಎಸ್ಸೈ ಶ್ರೀಶೈಲ ಮುರುಗೋಡ, ಪಡುಬಿದ್ರಿ ಪಿ.ಎಸ್ಸೈ ಪುರುಷೋತ್ತಮ್‌ ಮತ್ತು ಆರಕ್ಷಕ ಸಿಬ್ಬಂದಿಯವರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಅರೆಬರೆ ಕಾಮಗಾರಿಯ ವಿರುದ್ಧ ಸಾರ್ವಜನಿಕರ ಆಕ್ರೋಶ :

ಉಚ್ಚಿಲದಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದು ಸಾವು ನೋವುಗಳೂ ಕೂಡಾ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆ ನಿರ್ಮಾಣದ ಅರೆಬರೆ ಕಾಮಗಾರಿಯ ಕಾರಣದಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಎಲ್ಲೆಂದರಲ್ಲಿ ಕೆಲಸಗಳನ್ನು ಅರೆಬರೆಯಾಗಿ ನಡೆಸುತ್ತಿದ್ದು, ಯಾವುದೇ ಭಾಗದಲ್ಲಿ ಸಂಚಾರಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸದೆ ವಾಹನಗಳ ಸುಗಮ ಸಂಚಾರಕ್ಕೆ ಅವ್ಯಸವಸ್ಥೆ ಉಂಟು ಮಾಡುತ್ತಿದೆ. ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಹೆದ್ದಾರಿ ಇಲಾಖೆಯ ಅರೆಬರೆ ಕಾಮಗಾರಿಯಿಂದಾಗುತ್ತಿರುವ ಈ ಅವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಈ ಸಂದರ್ಭದಲ್ಲಿ ವ್ಯಕ್ತ ಪಡಿಸುತ್ತಿರುವುದು ಕಂಡು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next