ಬೆಂಗಳೂರು: ಜಯನಗರ 5ನೇ ಬ್ಲಾಕ್‌ನ ಚಂದ್ರಗುಪ್ತ ಮೌರ್ಯ ಕ್ರೀಡಾಂಗಣದಲ್ಲಿ ಶನಿವಾರ “ನಮ್ಮೂರ ಹಬ್ಬ’ ಕರಾವಳಿ ಉತ್ಸವದ ಉದ್ಘಾಟನೆ ಸಂಭ್ರಮ ಸಡಗರದಿಂದ ನೆರವೇರಿತು.
ಮೊದಲ ದಿನದ ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೃಹ ಸಚಿವರಾದ ರಾಮಲಿಂಗಾರೆಡ್ಡಿ, ಕರಾವಳಿಯ ಕಲೆ ಸಂಸ್ಕೃತಿಯನ್ನು ತಿಳಿಯಲು, ಅಲ್ಲಿನ ವೈವಿಧ್ಯಮಯ ಆಹಾರದ ರುಚಿ ನೋಡಲು ಇದೊಂದು ಒಳ್ಳೆ ಅವಕಾಶ. ಮಂಗಳೂರಿನ ಪರಿಸರವೇ ಇಲ್ಲಿ ನಿರ್ಮಾಣಗೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಚಿವರಾದ ಯು.ಟಿ. ಖಾದರ್ ಭೇಟಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹುಲಿ ವೇಷ, ಡೊಳ್ಳು ಕುಣಿತ ನೆರೆದಿದ್ದವರ ಉತ್ಸಾಹವನ್ನು ಹೆಚ್ಚಿಸಿತು. ಉತ್ಸವವನ್ನು ಉದ್ಘಾಟಿಸಿದ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ್ ಅವರು ಕರಾವಳಿ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸುತ್ತಾ ಬಂದಿರುವ ಅಭಿನಂದನಾ ಟ್ರಸ್ಟ್ ಕಾರ್ಯವನ್ನು ಶ್ಲಾ ಸಿದರು.
ಶಾಸಕ ಬಿ.ಎನ್. ವಿಜಯ್‌ಕುಮಾರ್, ಬಿಬಿಎಂಪಿ ಸದಸ್ಯೆ ಮಾಲತಿ ಸೋಮಶೇಖರ್, ಉದ್ಯಮಿಗಳಾದ ಸದಾನಂದ ಮೈಯ, ವಿ.ಕೆ. ಮೋಹನ್, ಲೋಕೇಶ್ ಜಿ.ಡಿ, ಕೆ. ಚಂದ್ರಶೇಖರ್, ನಿತಿನ್ ಸಿ.ಎಸ್ ಮತ್ತಿತರರು ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಪಾಲ್ಗೊಂಡರು.
ಉತ್ಸವದ ಅಂಗವಾಗಿ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಸತೀಶ್ ಆಚಾರ್ಯ ಅವರ ಮುಂದಾಳತ್ವದಲ್ಲಿ ಜರುಗಿದ ಕಾಟೂìನು ಹಬ್ಬ, ಫೋಟೊ ಸಂತೆ, ಛದ್ಮವೇಷ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಇಂದೂ ಉತ್ಸವದ ಕಡೆಯ ದಿನವಾಗಿದ್ದು ಇನ್ನಷ್ಟು ಪ್ರೇಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.