Advertisement

The Rise Of Ashoka: ಅಶೋಕನ ರಕ್ತಚರಿತೆ

10:37 AM Jan 12, 2025 | Team Udayavani |

ನೀನಾಸಂ ಸತೀಶ್‌ ನಟನೆಯ “ದಿ ರೈಸ್‌ ಆಫ್ ಅಶೋಕ’ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಸತೀಶ್‌ ಸಖತ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಹೊಸ ಇಮೇಜ್‌ನಲ್ಲಿ ಮಿಂಚಲಿದ್ದಾರೆ.

Advertisement

ಫೆಬ್ರವರಿ ತಿಂಗಳ 15ರಿಂದ “ದಿ ರೈಸ್‌ ಆಫ್ ಅಶೋಕ’ಸಿನಿಮಾದ ಚಿತ್ರೀಕರಣ ಮತ್ತೆ ಪ್ರಾರಂಭವಾಗಲಿದೆ. ಸತೀಶ್‌ ವೃತ್ತಿ ಜೀವನದ ಅತ್ಯುತ್ತಮ ಚಿತ್ರವಾಗಿದ್ದು, ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ.

ವೃದ್ಧಿ ಕ್ರಿಯೇಷನ್‌ ಹಾಗೂ ಸತೀಶ್‌ ಪಿಕ್ಚರ್ಸ್‌ ಹೌಸ್‌ ಬ್ಯಾನರ್‌ನಡಿ ವರ್ಧನ್‌ ನರಹರಿ, ಜೈಷ್ಣವಿ, ನೀನಾಸಂ ಸತೀಶ್‌ ರೈಸ್‌ ಆಫ್ ಅಶೋಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನೀನಾಸಂ ಸತೀಶ್‌ ನಾಯಕನಾಗಿ ಅಭಿನಯಿಸುತ್ತಿದ್ದು, ಬಿ.ಸುರೇಶ್‌, ಅಚ್ಯುತ್‌ ಕುಮಾರ್‌, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್‌ ಮೈತ್ರೀಯಾ, ಯಶ್‌ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.