ಬೀಜಿಂಗ್: ಚೀನ ತನ್ನ ಸ್ಮಾರ್ಟ್ ಡ್ರ್ಯಾಗನ್-3 ವಾಣಿಜ್ಯ ವಾಹಕ ರಾಕೆಟ್ ಅನ್ನು ಸೋಮವಾರ(ಜನವರಿ 13) ಶಾಂಡಾಂಗ್ ಪ್ರಾಂತ್ಯದ ಹೈಯಾಂಗ್ ಬಳಿಯ ಸಮುದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತು.ಹತ್ತು ಸೆಂಟಿಸ್ಪೇಸ್-01 ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಗೊತ್ತುಪಡಿಸಿದ ಕಕ್ಷೆಗೆ ಸೇರಿಸಿದೆ.
ಚೀನದ 2025 ರ ಮೊದಲ ಸಮುದ್ರ ಆಧಾರಿತ ರಾಕೆಟ್ ಉಡಾವಣೆಯಾಗಿದೆ, ಇದನ್ನು ತೈಯುವಾನ್ ಉಪಗ್ರಹ ಉಡಾವಣಾ ಕೇಂದ್ರವು ನಡೆಸಿದೆ. ಈ ಉಡಾವಣೆಯು ಮಹತ್ವದ ಮೈಲಿಗಲ್ಲಾಗಿದೆ.
ಚೀನ ಅಕಾಡೆಮಿ ಆಫ್ ಲಾಂಚ್ ವೆಹಿಕಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದ ಸ್ಮಾರ್ಟ್ ಡ್ರ್ಯಾಗನ್-3, ಒಟ್ಟು 31 ಮೀಟರ್ ಉದ್ದ ಮತ್ತು ಅಂದಾಜು 140 ಟನ್ ತೂಕ ಹೊಂದಿತ್ತು. ಕಡಿಮೆ-ಕಕ್ಷೆಯ ಸಣ್ಣ ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡಲು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಬಾಹ್ಯಾಕಾಶ ಪರಿಸರದ ಡಾಟಾ ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅಂತರ್ ಉಪಗ್ರಹ ಲೇಸರ್ ನೆಟ್‌ವರ್ಕಿಂಗ್ ಪರೀಕ್ಷೆಗಳಿಗೆ ಬಳಸಲಾಗುವ ಉಪಗ್ರಹಗಳನ್ನು ಹಾರಿಸಲಾಗಿದೆ.