Advertisement
ಬದಿಯಡ್ಕ ಪಂಚಾಯತ್‌ನ ಮಹತ್ತರ ಯೋಜನೆಯಾದ ವಯೋಜನರ ವಿಹಾರಕ್ಕೆ ಪೂರಕವಾದ ವಾತಾವರಣ ಒದಗಿಸುವ ಪಗಲ್ ವೀಡ್ (ಹಗಲು ಮನೆ) ಉದ್ಘಾಟನೆಗೊಂಡಿದೆ. ಬದಿಯಡ್ಕ ಗ್ರಾ.ಪಂ.ನಲ್ಲಿ 2018 – 19ರ ವಾರ್ಷಿಕ ಯೋಜನೆಯ ಅಂಗವಾಗಿ ವಯೋವೃದ್ಧರ ಮಾನಸಿಕ ಅಭಿವೃದ್ಧಿ ಮತ್ತು ವಿಶ್ರಮಕ್ಕೆ ಸಂಬಂಧಿಸಿ ಇಲ್ಲಿನ ಬೋಳುಕಟ್ಟೆ ಕಿರು ಸ್ಟೇಡಿಯಂ ಬಳಿ ನೂತನವಾಗಿ ನಿರ್ಮಿಸಲಾದ ಪಗಲ್ ವೀಡ್ (ಹಗಲು ಮನೆ)ನ್ನು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಉದ್ಘಾಟಿಸಿದರು.
Related Articles
ಬದಿಯಡ್ಕ ಪಂಚಾಯತ್‌ಪ್ರದೇಶದಲ್ಲಿ ಅರ್ಧಕ್ಕೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವ ನಗರ ಸಭಾ ಭವನ ಹಾಗೂ ಇಂಡೋರ್ ಸ್ಟೇಡಿಯಂ ಹಾಗೂ ಇತರ ಕೆಲಸ ಕಾರ್ಯಗಳನ್ನು ಈ ಆರ್ಥಿಕ ವರ್ಷದಲ್ಲಿ ಸಂಪೂರ್ಣಗೊಳಿಸಲಾಗುವುದು. ಬಡ್ಸ್ ಸ್ಕೂಲ್‌ನ ಕೆಲಸವೂ ಕೆಲವೇ ದಿನಗಳಲ್ಲಿ ಪೂರ್ತಿಯಾಗಲಿದೆ. ವೃದ್ಧರ ಅಸೋಸಿಯೇಶನ್‌ನ ವೃದ್ಧರ ಹಗಲು ಮನೆಯ ಪ್ರದೇಶದಲ್ಲಿ 5ಲಕ್ಷ ರೂಪಾಯಿ ಮೀಸಲಿಟ್ಟು ಕುಡಿನೀರಿನ ಸಮಸ್ಯೆಯನ್ನೂ ಪರಿಹರಿಸುವತ್ತ ಗಮನಹರಿಸಲಾಗಿದೆ.
-ಕೆ.ಎನ್. ಕೃಷ್ಣ ಭಟ್ ಪಂಚಾಯತ್ ಅಧ್ಯಕ್ಷರು, ಬದಿಯಡ್ಕ
Advertisement
ಸರ್ವ ಸಹಕಾರಕಾಸರಗೋಡು ಜಿಲ್ಲೆಯ ಅಭಿವೃದ್ಧಿಗೆ ಭಾಷಾ ಹಾಗೂ ವರ್ಗೀಯ ಸಮಸ್ಯೆ ಕಾಡುತ್ತಿದೆ ಯಾದರೂ ಪರಸ್ಪರ ಸೌಹಾರ್ದ ಹಾಗೂ ಉತ್ತಮ ಚಿಂತೆಗಳ ಮೂಲಕ ಮಾತ್ರ ಆ ಸಮಸ್ಯೆಯನ್ನು ಹೋಗಲಾಡಿಸಲು ಸಾಧ್ಯ ಎಂಬುದನ್ನು ಬದಿಯಡ್ಕ ಪಂಚಾಯತ್ ಸಾಬೀತುಪಡಿಸಿದೆ. ವಯೋವೃದ್ಧರಿಗಾಗಿ ವಿಶಿಷ್ಟವಾದ ಪದ್ಧತಿಯನ್ನು ರೂಪಿಸು ವುದರ ಮೂಲಕ ಮಾದರಿಯಾಗಿದೆ. ಹಗಲು ಮನೆಯಲ್ಲಿ ಪುಸ್ತಕಾಲಯದ ವ್ಯವಸ್ಥೆಯನ್ನು ಮಾಡುವಲ್ಲಿ ಎಲ್ಲ ವಿಧ ಸಹಕಾರ ನೀಡಲಾಗುವುದು.
– ಡಾ| ಸಜಿತ್‌ಬಾಬು , ಕಾಸರಗೋಡು ಜಿಲ್ಲಾಧಿಕಾರಿ – ಅಖೀಲೇಶ್ ನಗುಮುಗಂ