Advertisement

ಕೃಷಿ ಯೋಜನೆಗಳ ಮಾಹಿತಿ ರಥಕ್ಕೆ ಚಾಲನೆ

06:02 PM Jul 13, 2022 | Team Udayavani |

ಹೊಳೆಆಲೂರ: ಅತಿವೃಷ್ಟಿ ಕಾರಣದಿಂದ ಈ ಭಾಗದ ಹೆಸರು, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಗಳು ನಂಜಾಣು ರೋಗಕ್ಕೆ ಬಲಿಯಾಗುವ ಸಂಭವವಿದೆ. ಹಾಗಾಗಿ, ಹೋಬಳಿಯ ರೈತ ಸಮುದಾಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಸಕಾಲಿಕ ಕೀಟ ನಾಶಕ ಔಷ ಧಗಳನ್ನು ಬಳಕೆ ಮಾಡಬೇಕೆಂದು ತಾಲೂಕು ಕೃಷಿ ಸಹಾಯಕ ನಿರ್ದೇಶಕ ರವೀಂದ್ರ ಪಾಟೀಲ ಹೇಳಿದರು.

Advertisement

ಎಪಿಎಂಸಿ ಪ್ರಾಂಗಣದಲ್ಲಿ ಮಂಗಳವಾರ 2022-23ನೇ ಸಾಲಿನ ಸಮಗ್ರ ಕೃಷಿ ಯೋಜನೆಗಳ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

25 ರಿಂದ 40 ದಿನಗಳ ಅವಧಿಯಲ್ಲಿ ಬೆಳೆಗಳಿಗೆ ಬಿಳಿ ನೊಣಗಳು ನಂಜಾಣು ರೋಗ ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರ ನಿವಾರಣೆಗೆ ಪ್ರತಿ ಲೀಟರ್‌ ನೀರಿಗೆ 0.2 ಮೀ.ಲೀ. ಇಮಿಡಾಕ್ಲೀಪ್ರಿಡ್‌, 17.08 ಎಸ್‌.ಎಲ್‌. ಅಥವಾ 0.3 ಗ್ರಾ ಥೈಯಾಮಿಥಾಕ್ಸಾಮ್‌, 25 ಡಬ್ಲೂ ಜಿ ಅಥವಾ ಡಯಾಫೆಂತುರಾನ್‌ ಮಿಶ್ರಣ ಮಾಡಿ ಬೆಳೆಯ ಕೆಳಗಿನ ಎಲೆಗಳಿಗೆ ಮುಟ್ಟುವಂತೆ ಸಿಂಪಡಿಸಬೇಕು.

ಗ್ರಾಪಂ ಸಹಯೋಗದಲ್ಲಿ ನರೇಗಾ ಯೋಜನೆಯಲ್ಲಿ ರೈತರಿಗೆ ಕೃಷಿ ಹೊಂಡ, ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಹೂಲದ ಬದುಗಳಲ್ಲಿ ಮರ ನಡೆಲು, ತೋಟಗಾರಿಕಾ ಬೆಳೆ ಬೆಳೆಯಲು ಸಹಾಯಧನದ ಯೋಜನೆ ಲಭ್ಯವಿದೆ. ರೈತರು ಸರಕಾರದ ಸೌಲಭ್ಯ ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಹೇಳಿದರು.

ರೈತ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗಲದ, ಪ್ರಸ್ತುತ ಸಂರ್ಭದಲ್ಲಿ ಪ್ರಧಾನ ಮಂತ್ರಿಗಳು ರೈತರ ಹಿತ ಗಮನದಲ್ಲಿಟ್ಟುಕೊಂಡು ಫಸಲ್‌ ಬಿಮಾ, ರೈತ ಸಮ್ಮಾನ್‌ ಯೋಜನೆ ರೂಪಿಸಿದ್ದಾರೆ. ಬೆಳೆ ವಿಮೆ ಕಂತು ಭರಣಾ ಮಾಡಲು ರೈತರಿಗೆ ಕೊನೆಯ ಅವ ಧಿಯ ಮುನ್ನವೇ ಸೂಕ್ತ ಮಾಹಿತಿ, ಸೂಚನೆ ನೀಡುವಂತೆ ಕೃಷಿ ಅಧಿ ಕಾರಿಗಳಿಗೆ ತಿಳಿಸಿದರು.

Advertisement

ಈ ಸಂದರ್ಭದಲ್ಲಿ ರೋಣ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಸ್‌.ವಿ. ಶಾಂತಗೇರಿ, ಹೊಳೆಆಲೂರ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ವಿವಿಧ ಬೆಳೆಗಳ ಬೆಳೆ ನಿರ್ವಹಣೆ, ರೋಗ ನಿವಾರಣೆಯ ಮಾರ್ಗೋಪಾಯಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯ ರಾಮನಗೌಡ ಪಾಟೀಲ, ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಉಮಚಗಿ, ಎಚ್‌.ಬಿ.ಜಂಗಣ್ಣವರ, ಬಿಜೆಪಿ ಎಸ್‌ಸಿ ಘಟಕದ ಅಧ್ಯಕ್ಷ ಎಸ್‌.ಎನ್‌. ಮಾದರ, ಗ್ರಾಪಂ ಸದಸ್ಯೆ ಸುಮಂಗಲಾ ಕಲ್ಲಾಪೂರ, ಅಲ್ಲಿಸಾಬ ನದಾಫ್‌, ಸಂತೋಷ ದೊಡ್ಡಮನಿ, ಉಮೇಶ ಪೂಜಾರ, ಹೋಬಳಿ ಸುತ್ತಮುತ್ತಲಿನ ರೈತ ಸಮುದಾಯ, ಕೃಷಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next