Advertisement
ನಗರದ ಪ್ರಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಇಡೀ ದೇಶಕ್ಕೆ ಏಕ ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳು ಮೂಲೆಗುಂಪಾಗಲಿವೆ. ರಾಜ್ಯಗಳಲ್ಲಿ ಇಂತಹ ಚುನಾವಣಾ ಪ್ರಕ್ರಿಯೆ ನಡೆದರೆ ಸೂಕ್ತ ಎಂದರು. ಜನಪ್ರತಿನಿಧಿಗಳಿಂದ ಅಭಿವೃದ್ಧಿ ಯನ್ನು ಬಯಸುತ್ತೇವೆಯೇ ಹೊರತು ಪರಸ್ಪರ ಬೈದಾಡಿಕೊಳ್ಳುವುದನ್ನಲ್ಲ. ಜನಪ್ರತಿನಿಧಿಗಳ ತಪ್ಪು ಒಪ್ಪುಗಳನ್ನು ಅನು ಮಾನಪಡುವ ಬದಲು ತಮ್ಮ ಕ್ಷೇತ್ರದ ಸಮಗ್ರ ಬದಲಾವಣೆಗಾಗಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ರಾಜಕಾರಣದಲ್ಲಿರುವ ಎಲ್ಲ ಅವ್ಯ ವಸ್ಥೆಗಳಿಗೆ ಪಾರ್ಟಿ ಫಂಡ್ ಮೂಲವಾ ಗಿದೆ. ಹಾಗಾಗಿ ಆ ಹಣದ ವ್ಯವಹಾರ ಪ್ರಜಾಕೀಯದಲ್ಲಿಲ್ಲ. ಮಾಧ್ಯಮಗಳ ಮೂಲಕ ನನ್ನ ಆಶಯಗಳನ್ನು ಜನರ ಮುಂದಿಡುವ ಕೆಲಸ ಮಾಡುತ್ತಿದ್ದೇನೆ. ಭ್ರಷ್ಟಾಚಾರಕ್ಕೆ ಮೂಲ ಕಾರಣ ಶಿಕ್ಷಣ ಮತ್ತು ವೈದ್ಯಕೀಯ ರಂಗ ವ್ಯಾಪಾರವಾಗಿರುವುದು. ಈ ಎರಡೂ ಕ್ಷೇತ್ರಗಳು ಮುಕ್ತವಾಗಿದ್ದು, ಉಚಿತವಾಗಿದ್ದರೆ ಭ್ರಷ್ಟಾಚಾರ ಇರುವುದಿಲ್ಲ ಎಂದು ಉಪೇಂದ್ರ ಅಭಿಪ್ರಾಯಪಟ್ಟರು.
Related Articles
ಕೇಂದ್ರ ಸರಕಾರದ ನೋಟು ಅಮಾನ್ಯಿಕರಣದ ಕುರಿತು ಪ್ರತಿ ಕ್ರಿಯಿಸಿದ ಉಪೇಂದ್ರ, ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಕೆಲಸಗಳನ್ನೇ ಮಾಡುತ್ತಿದ್ದಾರೆ. ನೋಟು ಅಮಾನ್ಯಿàಕರಣ, ಜಿಎಸ್‌ಟಿ ಉತ್ತಮ ಯೋಜನೆಗಳಾದರೂ ಅವುಗಳ ಮಧ್ಯೆ ಅಂತರ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಸಿದ್ದ ರಾಮಯ್ಯನವರ ಸರಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎಂದು ಹೇಳುತ್ತಾ ಕುಳಿತುಕೊಳ್ಳದೆ, ಅಭಿವೃದ್ಧಿಗಷ್ಟೇ ಒತ್ತು ನೀಡಬೇಕು ಹೆಸರು, ದುಡ್ಡು ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದರು.
Advertisement
ಭಾವುಕ ವಿಷಯಗಳಿಂದ ಕೆರಳಿಸಬೇಡಿರಾಜಕೀಯದಲ್ಲಿ ಧರ್ಮ ನುಸುಳುತ್ತಿರುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಾತಿ-ಧರ್ಮಗಳು ನಮ್ಮ ಮನೆ-ಮನದಲ್ಲಿ ಇರಬೇಕು. ಸತ್ಯ ಇರುವಲ್ಲಿ ಧರ್ಮದ ಅಗತ್ಯವೇ ಇಲ್ಲ. ಅಸತ್ಯ ಇರುವಲ್ಲಿ ಧರ್ಮವನ್ನು ತೋರಿಸಿ ಲಾಭ ಪಡೆಯುವ ಪ್ರಯತ್ನ ನಡೆಯುತ್ತದೆ. ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳಲ್ಲಿ ಸುಧಾರಣೆ ಆಗಬೇಕೇ ವಿನಾ ಭಾವುಕ ವಿಷಯಗಳ ಮೂಲಕ ಜನರನ್ನು ಕೆರಳಿಸುವುದಕ್ಕೆ ಅರ್ಥವಿಲ್ಲ ಎಂದು ಪ್ರತಿಕ್ರಿಯಿಸಿದರು.