Advertisement

Ugravatara Review: ದುರ್ಗಿ ಭರ್ಜರಿ ಬೇಟೆ

10:59 AM Nov 02, 2024 | Team Udayavani |

ಅಪರಾಧಗಳಿಗೆ ಕೊನೆ ಎಂದು? ಈ ಪ್ರಶ್ನೆ ಬಹುಕಾಲ ಪ್ರಶ್ನೆಯಾಗಿಯೇ ಮುಂದುವರೆಯುತ್ತದೆ. ಎಷ್ಟೋ ಬಾರಿ ಕಣ್ಣೆದುರಿಗೆ ಏನೆಲ್ಲಾ ನಡೆದರೂ, ನೋಡಿಯೂ ನೋಡದಂತೆ ಕೈಕಟ್ಟಿ ಕುಳಿತಿರಬೇಕಾದ ಅಸಹನೀಯ ಸ್ಥಿತಿ. ಇಂತಹ ಸಂದರ್ಭಕ್ಕೆ, ಮೀತಿ ಮೀರುತ್ತಿರುವ ದುಷ್ಕೃತ್ಯಗಳಿಗೆ ಅಂತ್ಯ ಹಾಡಲು ಯಾರಾದರೊಬ್ಬರು ಉಗ್ರಾವತಾರ ತಾಳಬೇಕಾಗಿರುವುದು ಅನಿವಾರ್ಯವೇ ಸರಿ. ಆ ಅನಿವಾರ್ಯವೇ ಸಿನಿಮಾ ರೂಪದಲ್ಲಿ ಮೂಡಿಬಂದಿದೆ.

Advertisement

ಈ ವಾರ ತೆರೆಕಂಡ “ಉಗ್ರಾವತಾರ’ ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಹೆಸರಿಗೆ ತಕ್ಕಂತೆ ಉಗ್ರರೂಪ ತಾಳಿದ್ದಾರೆ. ಅದು ತಪ್ಪೆಂದು ತಿಳಿದರೂ ಮತ್ತೆ ಮತ್ತೆ ಅದೇ ತಪ್ಪನ್ನು ಮಾಡುವ ಪಾಪಿಗಳಿಗೆ, ಖಡಕ್‌ ಪೊಲೀಸ್‌ ಅಧಿಕಾರಿ ಶ್ರೀದುರ್ಗಿ ಕಲಿಸುವ ಪಾಠವೇ ಈ ಸಿನಿಮಾದ ಒನ್‌ ಲೈನ್‌. ಚಿತ್ರದ ಆರಂಭದಿಂದ ಕೊನೆವರೆಗೆ  ರಕ್ತದ ಹೆಜ್ಜೆಗಳಲ್ಲೇ ಸಿನಿಮಾ ಸಾಗುತ್ತದೆ. ಕತ್ತಿ, ಚೂರಿ, ಲಾಂಗ್‌, ಗನ್‌ ಎಲ್ಲವನ್ನೂ ಹಿಡಿಯುವ ನಾಯಕಿಗೆ, ಪಾಪಿಗಳನ್ನು ಬೇಟೆಯಾಡುವುದೇ ಮಖ್ಯ ಕೆಲಸ.

ಉಗ್ರಾವತಾರದ ಕಥೆ ಹೇಳಿರುವ ನಿರ್ದೇಶಕ ಗುರುಮೂರ್ತಿ ಅವರಿಗೆ, ಸಮಾಜದಲ್ಲಿ ನಡೆದ, ನಡೆಯುತ್ತಿರುವ ಸ್ತ್ರೀ ಶೋಷಣೆ, ಅತ್ಯಾಚಾರದ ಅಪರಾಧಗಳು, ನೈಜ ಘಟನೆಗಳ ಪ್ರೇರಣೆಯೇ ಆಧಾರ. ಪಾಪಿಗಳಿಗೆ ಶಿಕ್ಷೆ ನಿಶ್ಚಿತ ಎಂಬುದರ ಜೊತೆಗೆ ಸ್ತ್ರೀ ಸಮಾಜದ ರಕ್ಷಣೆಯ ಬಗ್ಗೆಯೂ ಸಿನಿಮಾ ಸಂದೇಶ ನೀಡುತ್ತದೆ. ಸದಾ ಸಾಫ್ಟ್ ಪಾತ್ರಗಳಲ್ಲಿ ಮಿಂಚಿರುವ ನಟಿ ಪ್ರಿಯಾಂಕಾ, ಮಾಸ್‌ ಅವತಾರದಲ್ಲೂ ಪ್ರೇಕ್ಷಕರನ್ನು ರಂಜಿಸಬಲ್ಲೇ ಎಂಬುದನ್ನು ನಿರೂಪಿಸಿದ್ದಾರೆ.

ಇನ್ನು ಚಿತ್ರದಲ್ಲಿ ಖಳನಟರ ದೊಡ್ಡ ದಂಡೇ ಕಾಣಸಿಗುತ್ತದೆ. ರಾಧಾಕೃಷ್ಣ ಬಸ್ರೂರ್‌ ಕಥೆಗೆ ತಕ್ಕ ಸಂಗೀತ ಸಂಯೋಜಸಿದ್ದಾರೆ. ಅಜಯ್‌, ಕಾಕ್ರಾಚ್‌ ಸುಧಿ, ಸುಮನ್‌, ಪವಿತ್ರಾ ಲೋಕೇಶ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next