Advertisement

ಅಮ್ಮನಾದ ಖುಷಿಯಲ್ಲಿ

04:21 AM Jun 03, 2020 | Lakshmi GovindaRaj |

ಭಾರತದ ಕೋಟಿ ಕೋಟಿ ಜನ, ಕೊರೊನಾ ವಿರುದ್ಧ ದೀಪ ಬೆಳಗಿದಂದು ನನ್ನ ಕಂದ ಹುಟ್ಟಿದ. ಅವತ್ತು ನಾನು ತಾಯಿಯಾದೆ. ಹಲವರಿಗೆ ದಿಗ್ಬಂಧನದಂತೆ ಕಾಡಿದ ಈ ಲಾಕ್‌  ಡೌನ್‌, ನನ್ನ ಪಾಲಿಗೆ ತಾಯ್ತನವನ್ನು ಸಂಪೂರ್ಣವಾಗಿ ಅನುಭವಿಸಲು ಅವಕಾಶ ನೀಡಿತು. ಈ ಸಮಯದಲ್ಲಿ ಮನೆಯವರೆಲ್ಲರೂ ನನ್ನ ಜೊತೆಗೆ ಇರುವ ಸದವಕಾಶವೂ ದೊರೆಯಿತು.

Advertisement

ಕಂದಮ್ಮನ ನಗು, ಅಳು, ನಿದ್ದೆ, ಹಠ ಎಲ್ಲದಕ್ಕೂ ಮನೆಯವರೆಲ್ಲರೂ ಸಾಕ್ಷಿಯಾದರು. ಅವನು ಹುಟ್ಟುವ  ಮುಂಚಿನ ಜೀವನ ಒಂದು ವಿಧವಾದರೆ, ಅವನು ಹುಟ್ಟಿದ ಮೇಲೆ ಎಲ್ಲವೂ ಬದಲು. ಇತರ ಜವಾಬ್ದಾರಿಗಳನ್ನು ಸಲೀಸಾಗಿ ನಿಭಾಯಿಸಬಹುದೇನೋ, ಆದರೆ ತಾಯಿಯ ಕರ್ತವ್ಯಗಳು ಸುಲಭವಲ್ಲ ಎಂಬುದನ್ನು ಅರಿತೆ. ಲಾಕ್‌ಡೌನ್‌  ಅವಧಿಯಲ್ಲಿ ಇತರರು ದಿನಕ್ಕೊಂದು ಬಗೆಯ ತಿಂಡಿ ಮಾಡಿ ತಿನ್ನುತ್ತಿದ್ದರೆ, ನನಗೋ ಬಾಣಂತಿ ಊಟ. ತಿಂಡಿಪೋತಿಯಾದ ನಾನು ನಾಲಿಗೆಯ ಆಸೆಗಳಿಗೆ ಕಡಿವಾಣ ಹಾಕಲೇಬೇಕಾಯ್ತು.

ಗಂಡ, ಅಮ್ಮ-ಅಪ್ಪನ ಸಹಕಾರದೊಂದಿಗೆ  ಬಾಣಂತಿಯ ದಿನಗಳನ್ನು ಯಶಸ್ವಿಯಾಗಿ ಕಳೆದೆ. ಜೀವನದ ಮರೆಯಲಾಗದ ಕ್ಷಣವನ್ನು, ಇಂಥ ಸಂದಿಗ್ದ ಪರಿಸ್ಥಿಯಲ್ಲಿ ಕಳೆಯುವಂತಾದರೂ, ಈ ಲಾಕ್‌ ಡೌನ್‌ ನನ್ನನ್ನು ಡೌನ್‌ ಮಾಡಲಿಲ್ಲ ಎಂಬುದು ಸಮಾಧಾನದ ಸಂಗತಿ.

* ಸುಪ್ರೀತಾ ವೆಂಕಟ್

Advertisement

Udayavani is now on Telegram. Click here to join our channel and stay updated with the latest news.

Next