ಮೈಸೂರು: ಬೆಂಗಳೂರು, ಮುಂಬೈ, ದೆಹಲಿ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮೈಸೂರು ಸಿಲ್ಕ್ ಮಳಿಗೆ ತೆರೆಯಲು ಅಗತ್ಯವಿರುವ ಕ್ರಮ ಗಳನ್ನು ಕೈಗೊಂಡು, ಶೀಘ್ರದÇÉೇ ಮಳಿಗೆಗಳನ್ನು ಆರಂಭಿಸಲಾಗುವುದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ಕೆ.ಸಿ ನಾರಾಯಣ ಗೌಡ ಹೇಳಿದರು.
ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಉತ್ತಮ ಗುಣಮಟ್ಟದೊಂದಿಗೆ ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಿಸಲು ಕೆಎಸ್‌ಐಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೈಸೂರು ರೇಷ್ಮೆ ಸೀರೆಗಳ ಮಾರಾಟ ಹೆಚ್ಚಿಸ ಬೇಕು. ಮಹಿಳೆಯರು ಹೆಚ್ಚಾಗಿ ಆಕರ್ಷಿಸುವಂತಹ ವಿಶೇಷ ಡಿಸೈನ್‌ಗಳನ್ನ ಸಿದ್ಧಪಡಿಸಿ.
ಮಾರ್ಕೆಟಿಂಗ್ ಸ್ಟ್ರಾಟರ್ಜಿಯನ್ನು ಬದಲಿಸಿ. ಹೆಚ್ಚಿನ ದರದ ಸೀರೆ ಖರೀದಿಸುವವರಿಗೆ ಸೂಟೆRàಸ್, ಸ್ಪೇಷಲ್ ಬ್ಯಾಗ್ ಗಳನ್ನು ನೀಡುವ ಮೂಲಕ ಗ್ರಾಹಕರ ಆಕರ್ಷಿಸು ವಂತಹ ಯೋಜನೆಗಳನ್ನು ರೂಪಿಸಬೇಕು. ರೇಷ್ಮೆ ವಸ್ತ್ರಗಳ ವಿಶೇಷ ಕಪಲ್ ಪ್ಯಾಕೇಜ್ ಆರಂಭ ಮಾಡಿದರೇ ಗ್ರಾಹಕರನ್ನು ಆಕರ್ಷಿಸಬಹುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ:- ಲೈಂಗಿಕ ಕಿರುಕುಳ: ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಮಹಮ್ಮದ್ ಫಾರೂಕ್ ಬಂಧನ
ದೆಹಲಿಯಲ್ಲಿ ಕೆಎಚ್‌ಡಿಸಿಗೆ ಸೇರಿದ ಜಾಗವನ್ನ ಪಡೆದು ಅಲ್ಲಿ ರೇಷ್ಮೆ ಮಳಿಗೆ ಆರಂಭಿಸಲು ಕೆಎಸ್ ಐಸಿ ಅಧಿಕಾರಿಗಳಿಗೆ ಸೂಚಿಸಿ, ಕೆಎಸ್‌ಐಸಿ ಘಟಕ ಗಳಲ್ಲಿ ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಿಸಬೇಕು. ಅದಕ್ಕೆ ಅಗತ್ಯವಿರುವ ಹೆಚ್ಚಿನ ಲೂಮ್ಗಳನ್ನ ಅಳವಡಿಸಿ, ಮೈಸೂರು ಘಟಕ 2ರಲ್ಲಿ ಎರಡನೇ ಪಾಳಿಯನ್ನು (ಸೆಕೆಂಡ್ ಶಿಫr…) ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತಿಳಿಸಿದರು. ರೇಷ್ಮೆ ಇಲಾಖೆಯಲ್ಲಿ 150 ಅನುಪಯುಕ್ತ ಪರ್ವ ಲೂಮ್‌ಗಳಿದ್ದು, ಅವುಗಳನ್ನು ದುರಸ್ತಿ ಮಾಡಿಸಿ ಅಗತ್ಯ ಇರುವ ಚನ್ನಪಟ್ಟಣ, ಮೈಸೂರು ಘಟಕಗಳಲ್ಲಿ ಅಳವಡಿಸಿ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಹೇಳಿದರು.
ಮೈಸೂರು ನೇಯ್ಗೆ ಕಾರ್ಖಾನೆಯಲ್ಲಿ ವಿದ್ಯುತ್ ಖರೀದಿಗೆ ಸುಮಾರು ಐದು ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಇದನ್ನ ತಪ್ಪಿಸಲು ಕಾರ್ಖಾನೆಯ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲು ತಿಳಿಸಿ, 500 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು ಎರಡು ಕೋಟಿ ವೆಚ್ಚವಾಗಲಿದೆ. ಎರಡು ತಿಂಗಳಲ್ಲಿ ಸೋಲರ್ ಪ್ಯಾನಲ್ ಅಳವಡಿಕೆಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು. ಈ ವೇಳೆ ಕೆಎಸ್‌ಐಸಿ ಅಧ್ಯಕ್ಷ ಎಸ್.ಆರ್. ಗೌಡ, ಕೆಎಸ್‌ಎಂಡಿ ಅಧ್ಯಕ್ಷೆ ಸವಿತಾ ಶೆಟ್ಟಿ ಇತರರಿದ್ದರು.