Advertisement

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಇ-ಬೈಕ್ ಮೂಲಕ ಅಂಚೆ ವಿತರಣೆ

04:56 PM Oct 28, 2021 | Team Udayavani |

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಅಂಚೆ ಕಚೇರಿಯಲ್ಲಿ ಇ-ಬೈಕ್‍ಗಳ ಮೂಲಕ ಪೋಸ್ಟ್ ಗಳನ್ನು ವಿತರಣೆ ಮಾಡಿ, ಸಿಲಿಕಾನ್ ಸಿಟಿಯಲ್ಲಿ ಹೊಸತನಕ್ಕೆ ನಾಂದಿ ಹಾಡಲಾಗಿದೆ.

Advertisement

ಬೆಂಗಳೂರಿನ ಜೆ.ಪಿ  ನಗರದ ಉಪ ಅಂಚೆ ಕಚೇರಿ ಸಿಬ್ಬಂದಿಗಳಿಗೆ ಎಲೆಕ್ಟ್ರಿಕ್ ಬೈಕ್ ಒದಗಿಸಲಾಗಿದ್ದು, ಪೋಸ್ಟ್ ಮ್ಯಾನ್‍ಗಳು ಅದರ ಮೂಲಕ ಪೋಸ್ಟ್ ಗಳನ್ನು ಡೆಲಿವರಿ ಮಾಡಲಿದ್ದಾರೆ.

ಈ ಅಂಚೆ ಕಚೇರಿಯಲ್ಲಿ ಒಟ್ಟು 15 ಪೋಸ್ಟ್ ಮೆನ್ ಹಾಗೂ ಪೋಸ್ಟ್ ವುಮೆನ್‍ಗಳು 15 ದಿನಗಳಿಂದ ನೀಲಿ ಬಣ್ಣದ ಯುಲು ಬೈಕ್‍ಗಳಲ್ಲಿ ಅಂಚೆಯನ್ನು ಸಂಬಂಧಪಟ್ಟವರಿಗೆ ವಿತರಣೆ ಮಾಡುತ್ತಿದ್ದಾರೆ.

ಅಕ್ಟೋಬರ್ 14ರಂದು ನಾವು ಅಂಚೆ ದಿನಾಚರಣೆಯ ವಾರದ ಪ್ರಯುಕ್ತ ಇ-ಪೋಸ್ಟ್ ಅನ್ನು ಪ್ರಾರಂಭಿಸಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾದರೆ ಮುಂದೆ ಇತರ ಅಂಚೆ ಕಚೇರಿಗಳಿಗೂ ವಿಸ್ತರಿಸಲಿದ್ದೇವೆ. ಎಂದು ಬೆಂಗಳೂರು ವಲಯದ ಜನರಲ್ ಪೋಸ್ಟ್ ಮಾಸ್ಟರ್ ಎಲ್.ಕೆ ಡ್ಯಾಶ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಬಳಿಯೇ ಇರಲಿ: ಸಚಿವ ಸೋಮಶೇಖರ್

Advertisement

ಸದ್ಯ, ಈ ವಾಹನಗಳನ್ನು ರಿಚಾರ್ಜ್ ಮಾಡಲು ಪ್ರತಿದಿನ ಯುಲು ಸಂಸ್ಥೆಗೆ ಕಳುಹಿಸಲಾಗುತ್ತಿದೆ. ಈ ಯೋಜನೆ ಇಂಧನ ಬಳಕೆಯ ದ್ವಿಚಕ್ರ ವಾಹನಕ್ಕೆ ಹೋಲಿಸಿ ಆರ್ಥಿಕವಾಗಿ ಹೆಚ್ಚು ಲಾಭದಾಯಕವಾಗಿದೆಯೇ ಎಂಬುದನ್ನು ಪರೀಕ್ಷಿಸಿ ಅವುಗಳ ಮೂಲಕ ಅಂಚೆಯನ್ನು ವಿತರಣೆ ಮಾಡಲಾಗುವುದು. ಈ ಯೋಜನೆ ಯಶಸ್ವಿಯಾದರೆ ಅಂಚೆ ಕಚೇರಿಯಲ್ಲಿಯೇ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಯುಲು ಸಂಸ್ಥೆ ಹೇಳಿದೆ ಎಂದು ಡ್ಯಾಶ್ ತಿಳಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next