Advertisement

ವಿಶ್ವಕಪ್‌ ಬಳಿಕ ತಾಹಿರ್‌ ಏಕದಿನಕ್ಕೆ ವಿದಾಯ

12:30 AM Mar 05, 2019 | Team Udayavani |

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದಾರೆ.

Advertisement

ಯುವ ಸ್ಪಿನ್ನರ್‌ಗಳು ತಂಡದಲ್ಲಿ ಸ್ಥಾನ ಸಂಪಾದಿಸಬೇಕೆಂಬ ಆಶಯ ಹೊಂದಿರುವ ತಾಹಿರ್‌ ಏಕದಿನ ಕ್ರಿಕೆಟಿನಿಂದ ಹಿಂದೆ ಸರಿಯಲು ನಿರ್ಧಾರಿಸಿದ್ದಾರೆ. ಆದರೆ ಟಿ20 ಕ್ರಿಕೆಟಿನಲ್ಲಿ ಮುಂದುವರಿಯಲ್ಲಿದ್ದು, 2020ರಲ್ಲಿ ಆಸ್ಟ್ರೇಲಿಯದಲ್ಲಿ  ನಡೆಯಲಿರುವ ಟಿ20 ವಿಶ್ವಕಪ್‌ ವರೆಗೆ ಆಡುವ ಭರವಸೆಯಲ್ಲಿದ್ದಾರೆ.

“ವಿಶ್ವಕಪ್‌ನಲ್ಲಿ ಆಡಬೇಕೆಂದು ಎಂದೋ ಬಯಸಿದ್ದೆ. ಶ್ರೇಷ್ಠ ತಂಡದಲ್ಲಿ ಆಡುತ್ತಿರುವುದು ನನ್ನ ಜೀವನದ ಸ್ಮರಣೀಯ ಗಳಿಗೆ. ದಕ್ಷಿಣ ಆಫ್ರಿಕಾದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ವಿಶ್ವಕಪ್‌ ಬಳಿಕ ಏಕದಿನ ಕ್ರಿಕೆಟಿಗೆ ವಿದಾಯ ಹೇಳಲಿದ್ದೇನೆ’ ಎಂದು ತಾಹಿರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next