Advertisement

Afro-Asia Cup: 2 ದಶಕಗಳ ಬಳಿಕ ಆಫ್ರೋ -ಏಷ್ಯಾ ಕಪ್‌?

10:09 PM Nov 05, 2024 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): ಒಂದು ಕಾಲದಲ್ಲಿ ಬಹಳ ಜನಪ್ರಿಯವಾಗಿದ್ದ ಆಫ್ರೋ-ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಪಂದ್ಯಾವಳಿಯನ್ನು ಪುನರಾರಂಭಿಸಲು ಆಫ್ರಿಕಾ ಕ್ರಿಕೆಟ್‌ ಅಶೋಸಿಯೇಶನ್‌ (ಎಸಿಎ), ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಜತೆ ಮಾತುಕತೆ ಆರಂಭಿಸಿದೆ. ಇದರಿಂದ ಎರಡೂ ಖಂಡಗಳ ಕ್ರಿಕೆಟ್‌ ಬಾಂಧವ್ಯ ವೃದ್ಧಿಯಾಗಲಿದೆ ಎಂಬುದು ಎಸಿಎ ನಂಬಿಕೆ.

Advertisement

ಆಫ್ರೋ-ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿ ಕೇವಲ 2 ಆವೃತ್ತಿಗಷ್ಟೇ ಸೀಮಿತವಾಗಿತ್ತು. 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯಾವಳಿ ಡ್ರಾಗೊಂಡರೆ, 2007ರ ಆವೃತ್ತಿಯಲ್ಲಿ ಏಷ್ಯಾ ತಂಡ ಚಾಂಪಿಯನ್‌ ಆಗಿತ್ತು. ಈ ಪಂದ್ಯಗಳು ಬೆಂಗಳೂರು ಮತ್ತು ಚೆನ್ನೈಯಲ್ಲಿ ನಡೆದಿದ್ದವು.

ಕೀನ್ಯಾದಲ್ಲಿ ನಡೆಯಬೇಕಿದ್ದ 2009ರ 3ನೇ ಆವೃತ್ತಿಯ ಪಂದ್ಯಾವಳಿ ಕಾರಣಾಂತರದಿಂದ ರದ್ದುಗೊಂಡಿತು. ಮುಂದೆ ಈ ಪಂದ್ಯಾವಳಿ ಕೇವಲ ನೆನಪಾಗಷ್ಟೇ ಉಳಿಯಿತು.

Advertisement

Udayavani is now on Telegram. Click here to join our channel and stay updated with the latest news.

Next