Advertisement
ರಬಾಡ ಅವರ ದಾಳಿಗೆ ಕುಸಿದ ಬಾಂಗ್ಲಾದೇಶವು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 307 ರನ್ನಿಗೆ ಆಲೌಟಾಯಿತು. ಇದರಿಂದ ದಕ್ಷಿಣ ಆಫ್ರಿಕಾ ಗೆಲುವಿಗೆ 106 ರನ್ ಗಳಿಸುವ ಸುಲಭ ಅವಕಾಶ ಪಡೆಯಿತು. ಪಂದ್ಯದ ನಾಲ್ಕನೇ ದಿನ ಉಟದ ವಿರಾಮದ ಮೊದಲೇ ದಕ್ಷಿಣ ಆಫ್ರಿಕಾ ತನ್ನ ದ್ವಿತೀಯ ಇನ್ನಿಂಗ್ಸ್ನಲ್ಲಿ 3 ವಿಕೆಟಿಗೆ 106 ರನ್ ಗಳಿಸಿ ಜಯಭೇರಿ ಬಾರಿಸಿತು. ಇದು ಏಷ್ಯದಲ್ಲಿ ಕಳೆದ 10 ವರ್ಷಗಳಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಗೆಲುವು ಆಗಿದೆ. ದಕ್ಷಿಣ ಆಫ್ರಿಕಾವು ಈ ಹಿಂದೆ 2014ರಲ್ಲಿ ಗಾಲೆಯಲ್ಲಿ ಶ್ರೀಲಂಕಾ ವಿರುದ್ಧ ಜಯ ದಾಖಲಿಸಿತ್ತು.
Advertisement
Mirpur Test: ಕಾಗಿಸೊ ರಬಾಡ 39ಕ್ಕೆ 6 ವಿಕೆಟ್; ದಕ್ಷಿಣ ಆಫ್ರಿಕಾ 7 ವಿಕೆಟ್ ಜಯಭೇರಿ
10:11 AM Oct 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.