Advertisement
ಎಷ್ಟು ಪ್ರಮಾಣದ ನೀರು ಅವಶ್ಯಕ?
Related Articles
Advertisement
ನೀರಿನ ಮೂಲಗಳು
ನಮ್ಮ ದೇಹಕ್ಕೆ ನೀರಿನ ಅವಶ್ಯಕತೆ ಇದೆ ಎಂದ ಮಾತ್ರಕ್ಕೆ ಅದು ಕೇವಲ ದ್ರವ ರೂಪದ ನೀರು ಎಂದುಕೊಂಡರೆ ತಪ್ಪು, ಏಕೆಂದರೆ ನಾವು ದಿನನಿತ್ಯ ಸೇವಿಸುವ ಆಹಾರಗಳಲ್ಲೂ ಸಾಕಷ್ಟು ಪ್ರಮಾಣದ ನೀರಿನ ಅಂಶ ಇರುತ್ತದೆ. ಒಟ್ಟು ಸೇವಿಸುವ ನೀರಿನ ಪ್ರಮಾಣದಲ್ಲಿ ಶೇ.20ರಷ್ಟು ನೀರನ್ನು ಆಹಾರವು ಪೂರೈಸುತ್ತದೆ. ಅನೇಕ ರೀತಿಯ ಹಣ್ಣು ಮತ್ತು ತರಕಾರಿಗಳು, ಅಂದರೆ ಕಲ್ಲಂಗಡಿ ಮತ್ತು ಸೊಪ್ಪು ತರಕಾರಿಗಳು ಇವುಗಳಲ್ಲಿ ಶೇ.90ರಷ್ಟು ನೀರಿನ ಆಂಶವನ್ನು ಒಳಗೊಂಡಿರುತ್ತದೆ. ಇದರ ಜೊತೆಗೆ ಹಾಲು ಮತ್ತು ಜ್ಯೂಸ್‌ನಂತಹ ಪಾನೀಯಗಳಲ್ಲಿ ನೀರಿನ ಆಂಶವೇ ಹೆಚ್ಚಾಗಿರುತ್ತದೆ.
ಮುಂಜಾನೆ ನೀರನ್ನು ಕುಡಿಯುವುದರಿಂದ ಪ್ರಯೋಜನಗಳು:
*ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ವಿಚಾರಗಳಲ್ಲಿ ನಾವು ಗೊಂದಲ ಮಾಡಿಕೊಳ್ಳುತ್ತೇವೆ. ನಮ್ಮ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ ಕೆಲವು ಸರಳ ಸೂತ್ರಗಳು, ಆರೋಗ್ಯವನ್ನು
*ಸುಧಾರಿಸುವಲ್ಲಿ ಬಹಳಷ್ಟು ಉತ್ತಮ ಪರಿಣಾಮವನ್ನು ಬೀರಬಲ್ಲವು. ಇವುಗಳಲ್ಲಿ ಒಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಸಾಕಷ್ಟು ನೀರನ್ನು ಸೇವಿಸುವುದು. ಇದರಿಂದ ಹೊಟ್ಟೆಯು ಬಹಳ ಚೆನ್ನಾಗಿ ಖಾಲಿ ಆಗುವುದಷ್ಟೇ ಅಲ್ಲದೇ, ಅನೇಕ ರೀತಿಯ ಅಪಾಯಕಾರಿ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಬಹಳಷ್ಟು ಪ್ರಯೋಜನಕಾರಿ.
* ಬೆಳಿಗ್ಗೆ ಖಾಲಿ ಹೊಟ್ಟೆಗೆ ನೀರನ್ನು ಕುಡಿಯುವುದರಿಂದ ದೊಡ್ಡಕರುಳು ಚೆನ್ನಾಗಿ ಸ್ವಚ್ಚವಾಗುತ್ತದೆ ಮತ್ತು ಇದರಿಂದ ಪೋಷಾಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಹಾಯಕವಾಗುತ್ತದೆ.
* ಹೊಸ ರಕ್ತ ಮತ್ತು ಸ್ನಾಯು ಕೋಶಗಳ ಸಂರಚನೆ ಸಾಧ್ಯವಾಗುತ್ತದೆ.
* ದೇಹದ ತೂಕ ಇಳಿಸಿಕೊಳ್ಳಲು ಅವಶ್ಯಕ.
* ಚಯಾಪಚಯ ಕ್ರಿಯೆಯು ಉತ್ತಮಗೊಳ್ಳುತ್ತದೆ.
* ದೇಹದ ದ್ರವಾಂಶವನ್ನು ಸಮತೋಲನದಲ್ಲಿ ಇಡುತ್ತದೆ ಮತ್ತು ರೋಗಾಣುಗಳ ವಿರುದ್ಧ ಹೋರಾಡುತ್ತದೆ.
ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಭೂತಗಳಲ್ಲಿ ಒಂದು. ಭೂಮಿಯ ಮತ್ತು ನಮ್ಮ ಶರೀರದ ಶೇ.70 ರಷ್ಟು ನೀರಿನಿಂದ ಆವೃತವಾಗಿದೆ. ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದ್ದಲ್ಲಿ ಎಲ್ಲರೂ ಆರೋಗ್ಯದಿಂದಿರಬಹುದು.