ಮುಂಬೈ: ದೇಶದ ಮೊದಲ ವಾಟರ್ ಟ್ಯಾಕ್ಸಿ ಸೌಲಭ್ಯವನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಸಜ್ಜುಗೊಳಿಸಲಾಗುತ್ತಿದೆ. ಈ ಸೌಲಭ್ಯಕ್ಕೆ ಇದೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.
ಮುಂಬೈ ಪೋರ್ಟ್ ಟ್ರಸ್ಟ್(ಎಂಬಿಪಿಟಿ), ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ(ಸಿಐಡಿಸಿಒ) ಮತ್ತು ಮಹಾರಾಷ್ಟ್ರ ನೌಕಾ ಮಂಡ ಳಿ(ಎಂಎಂಬಿ) ಜಂಟಿಯಾಗಿ ಈ ಸೌಲಭ್ಯವನ್ನು ಸಿದ್ಧಪಡಿಸಿವೆ. ಬಲ್ಲರ್ಡ್ ಪೀರ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್(ಐಸಿಟಿ) ಮತ್ತು ಫೆರ್ರಿವಫ್ìನಲ್ಲಿರುವ ದೇಸೀಯ ಕ್ರೂಸ್ ಟರ್ಮಿನಲ್‌ಗೆ(ಡಿಸಿಟಿ) ಮೊದಲನೆಯದಾಗಿ ಸಂಚಾರ ಆರಂಭವಾಗಲಿದೆ.
ಡಿಸಿಟಿಯಿಂದ ನೆರುಲ್, ಬೇಲಾಪುರ್, ವಾಶಿ, ಐರೋಲಿ, ರೇವಾಸ್, ಕಾರಂಜ, ಧರಮ್ತಾರ್, ಕಂಗ್ರೋಜಿ ಆ್ಯಂಗ್ರೆ ದ್ವೀಪ, ಥಾಣೆಯ ಜಲಮಾರ್ಗ ನಿರ್ಮಾಣ ಕಾಮಗಾರಿ ನಡೆಸುತ್ತಿರುವುದಾಗಿ ಸರ್ಕಾರ ತಿಳಿಸಿದೆ. ಹಾಗೆಯೇ ಐಸಿಟಿಯಿಂದ ಎಲಿಫ್ಯಾಂಟ್ ದ್ವೀಪಕ್ಕೂ ಮಾರ್ಗ ನಿರ್ಮಿಸಲಾಗುತ್ತಿದೆ.
ಇದನ್ನೂ ಓದಿ:ಲಾಕ್ ಡೌನ್ ಆತಂಕ : ರಾಜ್ಯದಲ್ಲಿ ಇಂದು 1,187 ಕೋವಿಡ್ ಪ್ರಕರಣಗಳು, 6 ಸಾವು
ಮುಂಬೈ ಮತ್ತು ನವಿ ಮುಂಬೈ ನಡುವೆ ಈ ಜಲಮಾರ್ಗವು ಮತ್ತೂಂದು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಲಿದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಲು ಈ ವಾಟರ್ ಟ್ಯಾಕ್ಸಿಯು 30 ನಿಮಿಷ ತೆಗೆದುಕೊಳ್ಳಲಿದೆ ಎನ್ನಲಾಗಿದೆ.