Advertisement
ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಅನೇಕ ಕಡೆ ಭೂಕುಸಿತ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿಯೂ ಎದುರಾಗಿದೆ. ಇಲ್ಲಿನ 7 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಬುಧವಾರ ಎಲ್ಲ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಬುಧವಾರ ಮೇಘ ಸ್ಫೋಟ ಸಂಭವಿಸಿ ದಿಢೀರ್ ಪ್ರವಾಹ ಉಂಟಾಗಿದೆ. ಪರಿಣಾಮ ಶಾಲಾ ಕಟ್ಟಡಗಳು ಸೇರಿದಂತೆ 13 ಕಟ್ಟಡಗಳನ್ನು ಕೊಚ್ಚಿಹೋಗಿದ್ದು, 20ರಷ್ಟು ಸೇತುವೆಗಳು ಹಾನಿಗೀಡಾಗಿವೆ. ವಿಮಾನ ಸಂಚಾರಕ್ಕೆ ಅಡ್ಡಿ:
ದೆಹಲಿಯಲ್ಲೂ ಬುಧವಾರ ಮಧ್ಯಾಹ್ನದಿಂದೀಚೆಗೆ ಧಾರಾಕಾರ ಮಳೆಯಾಗುತ್ತಿರುವ ಕಾರಣ, ವಿಮಾನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ದೆಹಲಿ ಏರ್‌ಪೋರ್ಟ್‌ನಲ್ಲಿ 7 ವಿಮಾನಗಳ ಪಥ ಬದಲಿಸಿದರೆ, 40 ವಿಮಾನಗಳ ಸಂಚಾರ ವಿಳಂಭವಾಗಿದೆ.