Advertisement
26/11ರಂದು ಲಷ್ಕರ್ ಉಗ್ರರು ತಾಜ್ ಹೋಟೆಲ್, ಒಬೆರಾಯ್ ಟ್ರೈಡೆಂಟ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ಮುಂಬೈ ಛಾಬಾದ್ ಹೌಸ್, ನಾರಿಮನ್ ಹೌಸ್, ಕಾಮಾ ಆಸ್ಪತ್ರೆ ಹಾಗೂ ಮೆಟ್ರೋ ಸಿನಿಮಾ ಗುರಿಯಾಗಿರಿಸಿ ದಾಳಿ ನಡೆಸಿದ್ದರು.
Related Articles
Advertisement
26/11 ಹೀರೋಗಳು :
ತುಕಾರಾಂ ಓಂಬ್ಲೆ
2008ರ ನವೆಂಬರ್ 26ರಂದು ಭಯೋ*ತ್ಪಾದಕ ದಾಳಿ ನಡೆದ ಸಂದರ್ಭದಲ್ಲಿ ಮುಂಬೈಯ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ತುಕಾರಾಂ ಓಂಬ್ಲೆ ಉ*ಗ್ರ ಅಜ್ಮಲ್ ಕಸಬ್ ನನ್ನು ಜೀವಂತವಾಗಿ ಸೆರೆ ಹಿಡಿದಿದ್ದರು. ಸೆರೆ ಹಿಡಿಯುವ ಮುನ್ನ ಕಸಬ್ ಹಲವು ಸುತ್ತಿನ ಗುಂಡಿನ ಸುರಿಮಳೆಗೈದ ಪರಿಣಾಮ ತುಕಾರಾಂ ಕೊನೆಯುಸಿರೆಳೆದಿದ್ದರು.
ಮೇಜರ್ ಸಂದೀಪ್ ಉನ್ನಿಕೃಷ್ಣನ್:
26/11 ದಾಳಿಯ ವೇಳೆ ತಾಜ್ ಪ್ಯಾಲೇಸ್ ಹೋಟೆಲ್ ಒಳಗೆ ಅಡಗಿದ್ದ ಭ*ಯೋತ್ಪಾದಕರ ಹೆಡೆಮುರಿ ಕಟ್ಟಲು ಎನ್ ಎಸ್ ಜಿ ಕಮಾಂಡೋ ತಂಡವನ್ನು ಮುನ್ನಡೆಸುತ್ತಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗುಂಡಿನ ದಾಳಿ ಹುತಾತ್ಮರಾಗಿದ್ದರು. ಸಂದೀಪ್ ಉನ್ನಿಕೃಷ್ಣನ್ ಗೆ 2009ರ ಜನವರಿ 26ರಂದು ದೇಶದ ಪರಮೋಚ್ಛ ಗೌರವವಾದ ಅಶೋಕ ಚಕ್ರ(ಮರಣೋತ್ತರ ) ನೀಡಲಾಗಿತ್ತು.
ಹೇಮಂತ್ ಕರ್ಕರೆ:
1982ರ ಐಪಿಎಸ್ ಬ್ಯಾಚ್ ಅಧಿಕಾರಿ ಹೇಮಂತ್ ಕರ್ಕರೆ ಭ*ಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥರಾಗಿದ್ದರು. 26/11 ದಾಳಿಯ ವೇಳೆ ಕಾಮಾ ಆಸ್ಪತ್ರೆ ಬಳಿ ಉ*ಗ್ರರು ಹೊಂಚು ಹಾಕಿ ಕರ್ಕರೆಯನ್ನು ಹ*ತ್ಯೆಗೈದಿದ್ದರು. ಕಾರ್ಯಾಚರಣೆ ವೇಳೆ ಕರ್ಕರೆ ಅವರು ತಾಜ್ ಹೋಟೆಲ್ ನೊಳಗೆ ಒತ್ತೆಯಾಳಾಗಿದ್ದ ಹಲವರನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಉಗ್ರರು ಹಾರಿಸಿದ ಮೂರು ಗುಂಡುಗಳು ಕರ್ಕರೆ ಅವರ ಎದೆಯನ್ನು ಸೀಳಿ ಹಾಕಿತ್ತು.
ಮಲ್ಲಿಕಾ ಜಗದ್:
26/11 ದಾಳಿ ನಡೆದ ವೇಳೆ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ಮಲ್ಲಿಕಾ ಜಗದ್ ಬ್ಯಾಂಕ್ವೆಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಂದು 24 ವರ್ಷದ ಮಲ್ಲಿಕಾ ಪ್ರದರ್ಶಿಸಿದ್ದ ಧೈರ್ಯ ಅಪ್ರತಿಮವಾದದ್ದು. ಉ*ಗ್ರರು ದಾಳಿ ನಡೆಸಿದ್ದಾರೆಂಬ ಪರಿಸ್ಥಿತಿ ತಿಳಿಯುತ್ತಿದ್ದಂತೆ ಹೋಟೆಲ್ ಒಳಗಿದ್ದ ಅತಿಥಿಗಳನ್ನು ರೂಂನೊಳಗೆ ಹೋಗುವಂತೆ ಹೇಳಿ ಬಾಗಿಲು ಮುಚ್ಚಿ, ಲೈಟ್ ಆರಿಸಿ, ಎಲ್ಲರೂ ಮೌನವಾಗಿ ಕುಳಿತಿರುವಂತೆ ಮಲ್ಲಿಕಾ ಸೂಚಿಸಿದ್ದರು. ಸೇನೆ ರಕ್ಷಣೆಗೆ ಆಗಮಿಸಿದ ನಂತರ ಆಕೆ ಎಲ್ಲರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಳು.
ಕರಂಬೀರ್ ಸಿಂಗ್ ಕಾಂಗ್:
ತಾಜ್ ಹೋಟೆಲ್ ನ ಜನರಲ್ ಮ್ಯಾನೇಜರ್ ಕರಂಬೀರ್ ಸಿಂಗ್ ಅವರ ಪತ್ನಿ ಮತ್ತು ಮಕ್ಕಳು ಉಗ್ರರ ಕೈಗೆ ಸಿಕ್ಕಿ ಪ್ರಾಣ ತ್ಯಜಿಸಿದ್ದರು. ಆದರೆ ಈ ನೋವಿನ ನಡುವೆಯೂ ಕರಂಬೀರ್ ಸಿಂಗ್ ಹೋಟೆಲ್ ಒಳಗೆ ಸಿಲುಕಿದವರ ಪ್ರಾಣ ರಕ್ಷಣೆಗಾಗಿ ರಾತ್ರಿ ಹಗಲು ಭದ್ರತಾ ಪಡೆ ಮತ್ತು ಸಿಬಂದಿಗಳ ಜತೆ ಕೈಜೋಡಿಸಿದ್ದರು. 26/11 ವೇಳೆ ಕರಂಬೀರ್ ನೂರಾರು ಮಂದಿಯ ಪ್ರಾಣ ಉಳಿಸಿದ್ದರು.
ಥೋಮಸ್ ವರ್ಗೀಸ್:
26/11 ದಾಳಿಯಲ್ಲಿ ಗುಂಡಿನ ಶಬ್ದ ಕೇಳಿದ ತಕ್ಷಣವೆ ತಾಜ್ ನ ವಸಾಬಿ ರೆಸ್ಟೋರೆಂಟ್ ನಲ್ಲಿ ಹಿರಿಯ Waiter ಆಗಿದ್ದ ಥೋಮಸ್ ವರ್ಗೀಸ್ ಅವರು ತಕ್ಷಣವೇ ಹೋಟೆಲ್ ಒಳಗಿದ್ದ ಅಥಿತಿಗಳ ಬಳಿ ತೆರಳಿ ಎಲ್ಲರೂ ಮಂಡಿಯೂರಿ ಕುಳಿತುಕೊಳ್ಳುವಂತೆ ಸೂಚಿಸಿ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಹೊರ ಕಳುಹಿಸಿದ್ದರು. ರೆಸ್ಟೋರೆಂಟ್ ನಲ್ಲಿ ಕೊನೆಯದಾಗಿ ಉಳಿದಿದ್ದ ಥೋಮಸ್ ಅವರನ್ನು ಉ*ಗ್ರರು ಗುಂಡಿಟ್ಟು ಹ*ತ್ಯೆಗೈದಿದ್ದರು.