Advertisement
ವಿಶಾಲವಾದ ವೈರಾಗ್ಯನಿಧಿ ಅಕ್ಕಮಹಾದೇವಿ ಮಹಾಮಂಟಪ, ಶ್ರೀ ವಿಶ್ವಗುರು ಬಸವಣ್ಣನವರ ಪ್ರಧಾನ ವೇದಿಕೆ, ಮಾರುತೇಶ್ವರ ಮಹಾದ್ವಾರ, ಶ್ರೀ ಪವಾಡಬಸವೇಶ್ವರ ದಾಸೋಹ ಮನೆ ಸಿದ್ಧವಾಗಿವೆ. ಗ್ರಾಮದ ಹೊರವಲಯದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, 2 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. 150/80 ಅಡಿ ಬೃಹತ್ ಪ್ರಮಾಣದ ವೇದಿಕೆ ನಿರ್ಮಾಣ ಮುಗಿದಿದ್ದು, ಜಿಲ್ಲೆಯ ವಿವಿಧ ಕಡೆಗಳಿಂದ ಅಂದಾಜು 5 ಸಾವಿರಕ್ಕಿಂತಲೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಖಡಕ್ ಜೋಳದ ರೊಟ್ಟಿ, ಬದನೆಕಾಯಿ ಪಲೆÂ, ಮೊಸರು, ಸಿರಾ, ಅನ್ನ ಸಾರಿನ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಆರ್ .ಜಿ. ಅಳ್ಳಗಿ ಹಾಗೂ ಗೌರವ ಕಾರ್ಯದರ್ಶಿ ಪ್ರೊ| ಯುವರಾಜ ಮಾದನಶೆಟ್ಟಿ ತಿಳಿಸಿದ್ದಾರೆ. ತಮ್ಮೂರಿನ ಜಾತ್ರೆ ನಡೆಯುವ ಹಾಗೇ ಕಳೆದ ವಾರದಿಂದ ಗ್ರಾಮವನ್ನು ಸಿಂಗರಿಸುವಲ್ಲಿ ಸಾರ್ವಜನಿಕರು ನಿರತರಾಗಿದ್ದಾರೆ.
ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ. 17ರಂದು ಹಮ್ಮಿಕೊಂಡಿರುವ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಆರ್.ಜಿ. ಅಳ್ಳಗಿ, ಗೌರವ ಕಾರ್ಯದರ್ಶಿ ಯುವರಾಜ ಮಾದನಶೆಟ್ಟಿ ತಿಳಿಸಿದರು.
Related Articles
Advertisement
ಫೆ. 17ರಂದು ಬೆಳಗ್ಗೆ 7:30ಕ್ಕೆ ಗ್ರಾಪಂ ಅಧ್ಯಕ್ಷೆ ಭಾರತಿ ಪಾಟೀಲ ರಾಷ್ಟ್ರಧ್ವಜ, ಕಸಾಪ ಅಧ್ಯಕ್ಷ ಆರ್.ಜಿ. ಅಳ್ಳಗಿ ಪರಿಷತ್ ಧ್ವಜ, ಪಿಎಸ್‌ಐ ಶರಣಗೌಡ ಗೌಡರ ನಾಡಧ್ವಜಾರೋಹಣ ನೆರವೇರಿಸುವರು. ಖ್ಯಾತ ಸಂಶೋಧಕ ಡಾ| ವಾಸುದೇವ ಬಡಿಗೇರ ಸರ್ವಾಧ್ಯಕ್ಷತೆ ವಹಿಸುವರು. ತಹಶೀಲ್ದಾರ್ ಎಂ.ಎನ್. ಚೋರಗಸ್ತಿ ಮೆರವಣಿಗೆ ಉದ್ಘಾಟಿಸುವರು.
ಸಕಲ ವಾಧ್ಯ ವೈಭವಗಳೊಂದಿಗೆ ವಿವಿಧ ಕಲಾ ತಂಡಗಳೊಂದಿಗೆ ಸರ್ವಾಧ್ಯಕ್ಷರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಗುವುದು. ಬೆಳಗ್ಗೆ 10:30ಕ್ಕೆ ಸಮ್ಮೇಳನವನ್ನು ಜಾನಪದ ವಿದ್ವಾಂಸ ಶಂಭು ಬಳಿಗಾರ ಉದ್ಘಾಟಿಸುವರು. ಮಧ್ಯಾಹ್ನ ಗೋಷ್ಠಿ, ಉಪನ್ಯಾಸ ನಡೆಯಲಿದೆ. ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ನಂತರ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.
ಗುರುರಾಜ ಬ. ಕನ್ನೂರ