Advertisement

Goa ಸಲೂನ್ ಹೆಸರಿನಲ್ಲಿ ಅಕ್ರಮ ಮಸಾಜ್ ಪಾರ್ಲರ್!

03:35 PM Apr 13, 2023 | Team Udayavani |

ಪಣಜಿ:  ಗೋವಾದ ಕಲಂಗುಟ್‍ನಲ್ಲಿ ಸಲೂನ್ ಹೆಸರಿನಲ್ಲಿ ಅಕ್ರಮ ಮಸಾಜ್ ಪಾರ್ಲರ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ದೂರು ಸ್ವೀಕರಿಸಿದ ಪೊಲೀಸರು ಸಲೂನ್ ಅನ್ನು ಸೀಲ್ ಮಾಡಿದ್ದಾರೆ.

Advertisement

ಕಲಂಗುಟ್‍ನಲ್ಲಿ ಸಲೂನ್‍ಗಾಗಿ ವ್ಯಕ್ತಿಯೊಬ್ಬರು ಬಾಡಿಗೆ ನೀಡಿದ್ದರು. ಆದರೆ ಆ ಬಾಡಿಗೆ ಕೋಣೆಯಲ್ಲಿ ಮತ್ತೊಂದು ಕೋಣೆ ನಿರ್ಮಾಣ ಮಾಡಿರುವ ಸಂಶಯ ಅಂಗಡಿಯ ಮಾಲೀಕರಿಗೆ ಬಂದಿತ್ತು. ಇದರಿಂದ ಅನುಮಾನಗೊಂಡ ಮಾಲಕರು ಪೋಲಿಸರಿಗೆ ದೂರು ನೀಡಿದ್ದರು.

ಪಮಿರ್ಂದರ್ ಸಿಂಗ್ ಎಂಬ ವ್ಯಕ್ತಿ ಸಲೂನ್ ನಡೆಸಲು ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದ. ಆದರೆ, ಸ್ವಲ್ಪ ಸಮಯದ ನಂತರ, ಅವರು ಆ ಅಂಗಡಿಯ ಒಳಗೆ  ಸಣ್ಣ ಕೋಣೆ ನಿರ್ಮಿಸಿದರು. ಅಲ್ಲದೆ, ಅಲ್ಲಿ ಒಂದು ಶೌಚಾಲಯವನ್ನು ನಿರ್ಮಿಸಲಾಗಿತ್ತು. ಈ ಬಗ್ಗೆ ಆತನ ಬಳಿ ಯಾವುದೇ ಪರವಾನಿಗೆ ಇಲ್ಲ, ಈ ವೇಳೆ ಸ್ಥಳೀಯರು ಅನುಮಾನಗೊಂಡು ಅಂಗಡಿ  ಮಾಲಕರನ್ನು ಸಂಪರ್ಕಿಸಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈ ಅಂಗಡಿಯ ಮಾಲಕರು ಮುಂಬೈನಲ್ಲಿದ್ದು, ಘಟನೆಯ ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಪಾ ಗೆ ಭೇಟಿ ನೀಡಿ ಪ್ರದೇಶವನ್ನು ಸೀಲ್ ಮಾಡಿದ್ದಾರೆ. ಪ್ರಕರಣದಲ್ಲಿ ಪೋಲಿಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next