Advertisement

MUDA ಅಕ್ರಮ: ಅಧಿಕಾರಿಗಳಿಂದ ಬೇನಾಮಿ ಹೆಸರಲ್ಲಿ ಆಸ್ತಿ, ಹೂಡಿಕೆ

12:53 AM Dec 06, 2024 | Team Udayavani |

ಮೈಸೂರು: ಮುಡಾ ಅಕ್ರಮ ದಲ್ಲಿ ಹಣ ಮಾಡಿರುವ ಅಧಿಕಾರಿಗಳು ತಮ್ಮ ಕುಟುಂಬಸ್ಥರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಮಾಡಿರುವ ಆಸ್ತಿ, ಕಂಪೆನಿಗಳಲ್ಲಿ ಹೂಡಿಕೆ ಕುರಿತು ತನಿಖೆ ಮಾಡುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಗುರುವಾರ ಮೈಸೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಮುಡಾದ 50:50 ಅನುಪಾತದ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಸ್ನೇಹಮಯಿ ಕೃಷ್ಣ ಅವರು ಲೋಕಾಯುಕ್ತಕ್ಕೆ ಮತ್ತೂಂದು ಮನವಿ ಪತ್ರ ಕೊಟ್ಟು, ತನಿಖೆಗೆ ಮನವಿ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ.ಗಳ ಅಕ್ರಮ ವ್ಯವಹಾರ ನಡೆದಿದೆ. ಅಕ್ರಮ ಹಣವನ್ನು ಅಧಿಕಾರಿಗಳು ತಮ್ಮ ಕುಟುಂಬಸ್ಥರ, ಸಂಬಂಧಕರ  ಹೆಸರಲ್ಲಿ, ಬೇರೆ ಬೇರೆ ಕಂಪನಿಗಳಲ್ಲಿ ಹೂಡಿರುವಂತಹ ಮಾಹಿತಿ ಬಂದಿತ್ತು. ಇದಕ್ಕೆ ಪೂರಕವಾಗಿ ನನಗೆ ಸಿಕ್ಕಿರುವ ದಾಖಲಾತಿ ಪ್ರಕಾರ ಮುಡಾದ ಹಿಂದಿನ ಆಯುಕ್ತ ಡಿ.ಬಿ. ನಟೇಶ್‌ ತಮ್ಮ ಹೆಂಡತಿ ರಶ್ಮಿ ಅವರನ್ನು ಸುಮಾರು ನಾಲ್ಕು ಸಂಸ್ಥೆಗಳಲ್ಲಿ ನಿರ್ದೇಶಕಿಯನ್ನಾಗಿ (ಪಾಲುದಾರರು) ಮಾಡಿ ಅದರಲ್ಲಿ ಹಣ ಹೂಡಿರುವುದು ಕಂಡುಬಂದಿದೆ. ನಾಲ್ಕು ಕಂಪೆನಿಗಳಿಗೆ ಆಕೆ ನಿರ್ದೇಶಕಿಯಾಗಿ¨ªಾರೆ. ಅದರಲ್ಲಿ ಹಣ ಹೂಡಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next