Advertisement

ಅಕ್ರಮ ಜಲ್ಲಿ ಕ್ರಷರ್: 20ಕ್ಕೂ ಹೆಚ್ಚು ಲಾರಿ ವಶ

06:08 PM Mar 31, 2021 | Team Udayavani |

ಮಂಡ್ಯ: ಶ್ರೀರಂಗಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಜಲ್ಲಿ ಕ್ರಷರ್ ನಡೆಸಿ ಜಲ್ಲಿ  ಮತ್ತು ಕಲ್ಲು ತುಂಬಿ ಸಾಗಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಲಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಹಂಗರಳ್ಳಿ ಗ್ರಾಮದ ಬಳಿ ನಡೆದಿದೆ.

Advertisement

ಇದನ್ನೂ ಓದಿ:ಪ್ರಧಾನಿ ಮೋದಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪತ್ರ

ಅರಣ್ಯಾಧಿಕಾರಿ ಸುನೀತಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ಟಿ.ಎಂ.ಹೊಸೂರು, ಕಾಳೇನಹಳ್ಳಿ, ಗಣಂಗೂರು, ಹಂಗರಳ್ಳಿ ಸೇರಿದಂತೆ ಇತರ ಅಕ್ರಮ ಗಣಿ ನಡೆಸುವ ಅರಣ್ಯ ಪ್ರದೇಶದ ಸ್ಥಳಗಳಿಗೆ ದಾಳಿ ನಡೆಸಿ ಸಾಗಾಟ ಮಾಡುತ್ತಿದ್ದ 20ಕ್ಕೂ ಹೆಚ್ಚು ಟಿಪ್ಪರ್ ಲಾರಿ ಹಾಗೂ ಟ್ರಾಕ್ಟರ್‌ಗಳನ್ನು ವಶಕ್ಕೆ ಪಡೆದು ಗಣಂಗೂರು ಅರಣ್ಯದ ಪ್ರವಾಸಿ ಮಂದಿರದ ಆವರಣದಲ್ಲಿ ನಿಲ್ಲಿಸಲಾಗಿದೆ. ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next