Advertisement

ಈ ಏರ್‌ ಕಂಡೀಷನರ್‌ಗೆ ವಿದ್ಯುತ್‌ ಬೇಕಿಲ್ಲ! ಗುವಾಹಟಿ ಐಐಟಿ ತಜ್ಞರಿಂದ ಹೊಸ ಆವಿಷ್ಕಾರ

10:50 AM Jul 05, 2022 | Team Udayavani |

ನವದೆಹಲಿ: ಕೋಣೆಗಳನ್ನು ತಂಪಾಗಿಸಲು ಬಳಸುವ ಸಾಂಪ್ರದಾಯಿಕ ಏರ್‌ ಕೂಲರ್‌ಗಳು ಹಾಗೂ ಏರ್‌ ಕಂಡೀಷನರ್‌ಗಳ ಬದಲಿಗೆ ಬಳಸಬಹುದಾದ, ವಿದ್ಯುತ್‌ ಇಲ್ಲದೆ ಉಪಯೋಗಿಸಬಹುದಾದ ಹೊಸ ಮಾದರಿಯ ರೇಡಿಯೇಟಿವ್‌ ಕೂಲರ್‌ ತಂತ್ರಜ್ಞಾನವುಳ್ಳ ಪರಿಕರವೊಂದನ್ನು ಗುವಾಹಟಿಯ ಐಐಟಿ ತಜ್ಞರು ಸಂಶೋಧಿಸಿದ್ದಾರೆ.

Advertisement

ಇದು ಮನೆಗಳ ಮೇಲ್ಛಾವಣಿಗೆ ಮನೆಯ ಒಳಮುಖದಿಂದ ಅಳವಡಿಸುವ ಚಪ್ಪಟೆಯಾಕಾರದ ಯಂತ್ರವಾಗಿದ್ದು, ಹಗಲು,¤ ರಾತ್ರಿ ನಿರಂತರ ಕೆಲಸ ಮಾಡಬಲ್ಲದು ಎಂದು ತಜ್ಞರು ತಿಳಿಸಿದ್ದಾರೆ.

ಹೇಗೆ ಕೆಲಸ ಮಾಡುತ್ತೆ?
ಇದರಲ್ಲಿನ ರೇಡಿಯೇಟಿವ್‌ ಕೂಲಿಂಗ್‌ ವ್ಯವಸ್ಥೆಯು ರಾತ್ರಿಯ ವೇಳೆ ಮನೆಯೊಳಗಿನ ವಾತಾವರಣದಲ್ಲಿರುವ ಉಷ್ಣವನ್ನು ಹೀರಿಕೊಂಡು ಅದನ್ನು ಇನ್‌ಫ್ರಾರೆಡ್‌ ಕಿರಣಗಳನ್ನಾಗಿ ಪರಿವರ್ತಿಸುತ್ತದೆ. ಇದೇ ಕಿರಣಗಳಿಂದ ಈ ಯಂತ್ರ ಕಾರ್ಯನಿರ್ವಹಿಸುತ್ತದೆ.

ಮನೆಯಿಂದ ಹೀರಿಕೊಂಡ ಆ ಉಷ್ಣವನ್ನು ತನ್ನ ಇಂಧನವನ್ನಾಗಿ ಪರಿವರ್ತಿಸಿದ ನಂತರ ಆ ಇಡೀ ಉಷ್ಣ ವಾಯುವನ್ನು ತನ್ನ ಮತ್ತೂಂದು ಪಾರ್ಶ್ವದಿಂದ ಮನೆಯ ಮೇಲ್ಫಾಗದಲ್ಲಿರುವ ವಾತಾವರಣಕ್ಕೆ ನೂಕುತ್ತದೆ. ಇದರಿಂದ ಮನೆಯೊಳಗಿನ ವಾತಾವರಣ ತಣ್ಣಗಿರುತ್ತದೆ. ಇನ್ನು, ಹಗಲು ಹೊತ್ತಿನಲ್ಲಿ ಸೂರ್ಯನಿಂದ ಬರುವ ಶಾಖದ ಕಿರಣಗಳನ್ನು ಪುನಃ ವಾತಾವರಣಕ್ಕೆ ಪ್ರತಿಫ‌ಲಿಸುವ ಮೂಲಕ ಮನೆಯನ್ನು ತಂಪಾಗಿಡಲು ನೆರವಾಗುತ್ತದೆ.

ಮತ್ತಷ್ಟು ಸುಧಾರಣೆ ಅಗತ್ಯ
ಸದ್ಯದ ಮಟ್ಟಿಗೆ ಹಗಲು ಹೊತ್ತಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ತಂಪನ್ನು ಇದು ನೀಡುತ್ತಿಲ್ಲ. ಈ ವಿಚಾರದಲ್ಲಿ ತಂತ್ರಜ್ಞಾನವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ರಾತ್ರಿಯಲ್ಲಿ ಇದು ನಿರೀಕ್ಷಿತ ಮಟ್ಟದಲ್ಲಿ ಮನೆಯನ್ನು ತಂಪಾಗಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next