Advertisement

ಹಚ್ಚೆ ಇದ್ದರೆ ವಾಯುಪಡೆಯಲ್ಲಿ ಕೆಲಸವಿಲ್ಲ: ದಿಲ್ಲಿ ಹೈಕೋರ್ಟ್‌

06:25 AM Jan 29, 2018 | Harsha Rao |

ನವದೆಹಲಿ: ದೇಹದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದೀರಾ? ಹಾಗಿದ್ದರೆ ಭಾರತೀಯ ವಾಯುಸೇನೆ (ಐಎಎಫ್)ಗೆ ಸೇರ್ಪಡೆಯಾಗುವುದು ಸಾಧ್ಯವಿಲ್ಲ. ಹೀಗೆಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿದೆ. ಐಎಎಫ್ನಲ್ಲಿ ಏರ್‌ವೆುನ್‌ ಹುದ್ದೆಗಾಗಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅವರ ಮುಂದೋಳಿನಲ್ಲಿ ಹಚ್ಚೆ (ಟ್ಯಾಟೂ) ಇದ್ದಿದ್ದರಿಂದ ಅವರ ನೇಮಕವನ್ನು ರದ್ದು ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ವಾಯುಪಡೆಯ ಆದೇಶವನ್ನೇ ಕೋರ್ಟ್‌ ಎತ್ತಿಹಿಡಿದಿದೆ.

Advertisement

ಐಎಎಫ್ ಪರ ವಕೀಲರು ವಾದಿಸಿ ಮೊಣಕೈನಿಂದ ಮಣಿಕಟ್ಟಿನ ವರೆಗೆ ಒಳಭಾಗದಲ್ಲಿ ಇರುವ ಸಾಂಪ್ರದಾಯಿಕ ಹಚ್ಚೆಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ.  ಅವುಗಳನ್ನೂ ಆಯ್ಕೆ ಸಮಿತಿಯೇ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ. ಕೆಲವೊಂದು ರೀತಿಯ ಹಚ್ಚೆಗಳಿಗೆ ಐಎಎಫ್ ವಿನಾಯಿತಿ ನೀಡುತ್ತದೆ. ವಿಶೇಷವಾಗಿ ಬುಡಕಟ್ಟು ಜನಾಂಗದವರು ಬಳಕೆ ಮಾಡುವ ಸೇರಿದಂತೆ ಸಾಂಪ್ರದಾಯಿಕವಾಗಿರುವ ಹಚ್ಚೆಗಳಿಗೆ ಅವಕಾಶವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next