Advertisement

ರೈಲು ಸೀಟು ಖಾಲಿಯಿದ್ದರೆ ಟಿಕೆಟ್‌ನಲ್ಲಿ ರಿಯಾಯಿತಿ

11:00 AM Dec 17, 2017 | Harsha Rao |

ಹೊಸದಿಲ್ಲಿ: ವಿಮಾನ ಸಂಸ್ಥೆಗಳು, ಹೋಟೆಲ್‌ಗ‌ಳಂತೆಯೇ ರೈಲ್ವೇ ಕೂಡ ಟಿಕೆಟ್‌ ಬುಕ್‌ ಆಗದೇ ಇದ್ದಾಗ ರಿಯಾಯಿತಿ ಘೋಷಿಸುವ ಯೋಜನೆ ಜಾರಿಗೆ ತರಲಿದೆ. ಸದ್ಯ ಜಾರಿಯಲ್ಲಿರುವ ಫ್ಲೆಕ್ಸಿ ಫೇರ್‌ ಸ್ಕೀಮ್‌ ಅನ್ನು ಸಂಪೂರ್ಣ ಬದಲಾಯಿಸುವ ಇಂಗಿತವನ್ನು ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ವ್ಯಕ್ತಪಡಿಸಿದ್ದಾರೆ. ಫ್ಲೆಕ್ಸಿ ಫೇರ್‌ ಸ್ಕೀಮ್‌ ಮರುಪರೀಶಿಲಿಸುವ ಬಗ್ಗೆ ರೈಲ್ವೇ ಮಂಡಳಿ ಈ ಪ್ರಸ್ತಾವನೆ ಸಲ್ಲಿಸಿದೆ. ಈ ಹಿಂದೆ ನಾವು ಬೆಲೆ ಏರಿಕೆ ಬಗ್ಗೆಯಷ್ಟೇ ಯೋಚಿಸುತ್ತಿದ್ದೆವು. ಈಗ ರಿಯಾಯಿತಿಯನ್ನೂ ಘೋಷಿಸಲು ಚಿಂತನೆ ನಡೆಸುತ್ತಿದ್ದೇವೆ ಎಂದು ಗೋಯಲ್‌ ಹೇಳಿದ್ದಾರೆ. ಕೊನೇ ಕ್ಷಣದಲ್ಲಿ ಸೀಟು ಖಾಲಿ ಇದ್ದರೆ ರಿಯಾಯಿತಿ ದರದಲ್ಲಿ ನೀಡಬಹುದಾಗಿದೆ. ಈ ಬಗ್ಗೆ ರೈಲ್ವೇ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿಯವರ ಪರಿಣಿತಿ ಬಳಸಿಕೊಳ್ಳಲಾಗುತ್ತಿದೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next