Advertisement

ಭಾಷೆ ನಾಶವಾದರೆ ಸಂಸ್ಕೃತಿಗೂ ಧಕ್ಕೆ

11:01 PM May 23, 2019 | Team Udayavani |

ಹಾಸನ: ನಾಡಿನ ಭಾಷೆ ನಾಶವಾದರೆ ಸಂಸ್ಕೃತಿಯೂ ನಾಶವಾಗುತ್ತದೆ. ಆದ್ದರಿಂದ ಕನ್ನಡಿಗರಿಗೆ ಸಿಗುವ ಅವಕಾಶಗಳು ಕೈ ತಪ್ಪದಂತೆ ನೋಡಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

Advertisement

ನಗರದ ಬಿ.ಕಾಟೇಹಳ್ಳಿಯಲ್ಲಿರುವ ಸಂತ ಜೋಸೆಫ‌ರ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ-ಜೆಸ್ವಿಟ್‌ ವತಿಯಿಂದ ನವಸದನ ಭವನದಲ್ಲಿ ರಾಜ್ಯಮಟ್ಟದ ಕನ್ನಡ ನಾಡು ನುಡಿ ಸಂಗೋಪನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಭಾರತ ಬಹು ಸಂಸ್ಕೃತಿ ದೇಶ: ಭಾರತ ಬಹು ಸಂಸ್ಕೃತಿಯ ದೇಶ ಹಾಗೆಯೇ ಕನ್ನಡ ನಾಡು ಬಹು ಸಂಸ್ಕೃತಿಯ ಬೀಡು. ಕರ್ನಾಟಕದಲ್ಲಿ ಕನ್ನಡಿಗರಿಗೆ ಅವಕಾಶಗಳು ಕಡಿಮೆಯಾಗುತ್ತಿರುವುದು ದುರುಂತವೇ ಸರಿ, ಕನ್ನಡ ನುಡಿಯ ಬಗ್ಗೆ ಕನ್ನಡಿಗರಿಗೇ ಇರುವ ಕೀಳರಿಮೆ ಹೋಗಲಾಡಿಸಿ ಭಾಷೆಯ ಸತ್ವವನ್ನು ತಾಯಿಯ ತೊಟ್ಟಿಲಿನಿಂದಲೇ ಉಳಿಸಿಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕನ್ನಡಕ್ಕೆ ಕ್ರೈಸ್ತ ಮಿಶನರಿಗಳ ಕೊಡುಗೆ ಅಪಾರ: ಭಾಷೆ ನಾಶವಾದರೆ ಆ ಭಾಷೆಯ ಜನಾಂಗದ ಸಂಸ್ಕೃತಿ ನಾಶವಾಗುತ್ತದೆ. ಕ್ರೆçಸ್ತ ಮಿಷನರಿಗಳ ಕೊಡುಗೆ ಹಳೆಗನ್ನಡ, ನಡುಗನ್ನಡ ಸಂದರ್ಭದಲ್ಲಿ ಸಾಕಷ್ಟಿದೆ. ಜೆಸ್ವಿಟ್‌ ಯುವ ಸಹೋದರರು ಧಾರ್ಮಿಕ ಸಂಸ್ಥೆಗಳಲ್ಲಿ ಕನ್ನಡ ನಾಡು ನುಡಿ ಸಂಗೋಪನೆಗೆ ಸಹಕಾರ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆ ಎಂದು ಹೇಳಿದರು.

ವಚನ ಸಾಹಿತ್ಯದ ಹಿರಿಮೆ: ಹಾಸನದ ಎವಿಕೆ ಕಾಲೇಜಿನ ಪ್ರಾಧ್ಯಾಪಕ ಡಾ.ಸೀ.ಚ. ಯತೀಶ್ವರ್‌ ಅವರು ಮಾತನಾಡಿ, ವಚನ ಸಾಹಿತ್ಯವು ಇಡೀ ಜಗತ್ತಿನ ಎಲ್ಲ ಸಾಹಿತ್ಯದಲ್ಲೂ ಗುರುತಿಸುವಂತಹ ಸತ್ವ ಪಡೆದುಕೊಂಡಿದೆ. ಬಸವಣ್ಣನವರ ವಚನಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿವೆ ಯವ ಸಮುದಾಯ ಅದರ ಅರ್ಥವನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

Advertisement

ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ಫಾ. ಫ್ರಾನ್ಸಿಸ್‌ ಫೆರ್ನಾಂಡಿಸ್‌, ಕಾಲೇಜಿನ ನಿರ್ದೇಶಕ ಫಾ. ರೋಶನ್‌ ಪಿರೇರಾ ಅವರು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಶುಂಪಾಲರಾದ ದಿನೇಶ್‌ ಎಂ. ಗಾಂವಾಕರ್‌ ಹಾಗೂ ಕಾಲೇಜಿನ ಕನ್ನಡ ಅಧ್ಯಾಪಕ ಡಿ.ಬಿ. ರಂಗೇಗೌಡ ವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಜೆಸ್ವಿಟ್‌ ಸಹೋದರಾರದ ಸ. ಕಿರಣ್‌ ಪಾಶನ್‌ರವರು ಕಾರ್ಯಕ್ರಮ ನಿರೂಪಿಸಿದರು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಅನೇಕ ಜೆಸ್ಟಿಟ್‌ ಸಹೋದರರು ಹಾಗೂ ಕಾಲೇಜಿನ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next