Advertisement

ರಾಮನ ಆದರ್ಶ ಪಾಲನೆಯಾದರೆ ನಮ್ಮದು ರಾಮರಾಜ್ಯ

07:15 AM Mar 27, 2018 | Team Udayavani |

ಮಲ್ಪೆ: ಪ್ರತಿಯೊಬ್ಬರು ರಾಮನ ಆದರ್ಶವನ್ನು ಪಾಲಿಸಿದಂತಾದರೆ ನಮ್ಮ ರಾಜ್ಯವು ರಾಮ ರಾಜ್ಯವಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದು ಉಡುಪಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನುಡಿದರು.

Advertisement

ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮಾತೃಮಂಡಳಿ, ದುರ್ಗಾವಾಹಿನಿ ಮತ್ತು ಉಡುಪಿ ಶ್ರೀ ರಾಮೋತ್ಸವ ಸಮಿತಿಯ ವತಿಯಿಂದ ರವಿವಾರ ಮಲ್ಪೆ ಬೀಚ್‌ನಲ್ಲಿ ಶ್ರೀ ರಾಮೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಸಂಘಟಿತರಾಗಿ ಹೋರಾಡಬೇಕು 
ಹಿಂದೆ ಒಬ್ಬ ರಾವಣನಿದ್ದ ಒಬ್ಬ ಮಂಥರೆ ಇದ್ದಳು. ಇಂದು ಎಲ್ಲಡೆ ರಾವಣನಂತವರು ಮಂಥರೆಯಂತವರು ಇದ್ದಾರೆ. ಆವತ್ತು ಒಬ್ಬಳು ಮಂಥರೆ ರಾಮನ ರಾಜ್ಯದ ಪದವಿಯನ್ನು ಕಿತ್ತುಕೊಂಡಳು, ಇಂದು ಅನೇಕ ಮಂಥರೆಯರು ರಾಮನನೇ° ಈ ರಾಷ್ಟ್ರದಿಂದ ಓಡಿಸಬೇಕೆಂಬ ಸಂಚನ್ನು ಮಾಡುತ್ತಿದ್ದಾರೆ. ಅಂತವರಿಗೆ ತಂತ್ರಬಲ ಇರಬಹುದು, ಆದರೆ ಅದಕ್ಕೆ ಪ್ರತಿತಂತ್ರವಾಗಿ ನಮ್ಮಲ್ಲಿ ಮಂತ್ರಬಲವಿದೆ, ಸಂತರ ಬಲವೂ ಇದೆ. ಎಲ್ಲ ಬಲವನ್ನು ಒಗ್ಗೂಡಿಕೊಂಡು ನಾವು ಶ್ರೀರಾಮನಿಗೆ ಸುಂದರವಾದ ಮಂದಿರವನ್ನು ನಿರ್ಮಾಣ ಮಾಡಬೇಕು. ಅದಕ್ಕಾಗಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದರು.

ಉದ್ಯಮಿ ಇಂದ್ರಾಳಿ ಜಯಕರ ಶೆಟ್ಟಿ ಅವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು.ಕಪಿಲಾಶ್ರಮ ಉತ್ತರಕಾಶಿ ಹರಿದ್ವಾರದ ಶ್ರೀ ರಾಮಚಂದ್ರ ಸ್ವಾಮೀಜಿ ಮಾತನಾಡಿ, ನಾವು ರಾಮನ ಕತೆಗಳನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೂಂದು ಕಿವಿಯಲ್ಲಿ  ಬಿಡುತೇ¤ವೆ. ರಾಮನ ಆದರ್ಶವನ್ನು ನಾವು ಅನುಸರಣೆ ಮಾಡುವುದಿಲ್ಲ. ಪರಿಣಾಮ ಇವತ್ತು ಅನುಭವಿಸಬೇಕಾದ ಈ ಸಂಕಷ್ಟ ಪರಿಸ್ಥಿತಿ ನಮಗೆ ಬಂದಿರುವುದು ಎಂದರು.

ರಾವಣ ಕುಳಿತು ಕೊಂಡಿದ್ದಾನೆ
ನಮ್ಮ ರಾಜ್ಯದಲ್ಲೊಬ್ಬ ರಾವಣ ಕುಳಿತು ಕೊಂಡಿದ್ದಾನೆ. ಆತನಿಗೆ ನೀತಿ ಧರ್ಮ ಎಂಬುದೇ ಇಲ್ಲ. ಒಡೆದು ಆಳುವ  ನೀತಿಯನ್ನು ತೋರಿಸುತ್ತಿದ್ದಾನೆ. ನನ್ನದೊಂದು ಸವಾಲು ಇದೆ. ನೀವು ಯಾವ ರೀತಿ ಹಿಂದೂಗಳನ್ನು ಒಡೆಯಲು ಪ್ರಯತ್ನ ಮಾಡಿದೀರೋ ತಾಕತ್ತು ಇದ್ದರೆ ಅನ್ಯಧರ್ಮವನ್ನು ಒಡೆದು ತೋರಿಸಿ ಆವಾಗ ನೀವು ಹಿಂದೂ ಎಂದು ನಾವು ಒಪ್ಪುತ್ತೇವೆ ಇಲ್ಲದಿದ್ದರೆ ನೀವು ಹಿಂದೂ ಅಲ್ಲ ಎಂದು ರಾಮಚಂದ್ರ ಸ್ವಾಮಿಗಳು ಹೇಳಿದರು.

Advertisement

ಕರ್ನಾಟಕ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷ ಎಂ. ಬಿ. ಪುರಾಣಿಕ್‌, ಸಂಸದೆ ಶೋಭಾ ಕರಂದ್ಲಾಜೆ, ರಘುನಾಥ ಸೋಮಯಾಜಿ ಮಂಗಳೂರು, ವಿ.ಹಿಂ. ಪ. ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಬಜರಂಗದಳದ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್‌., ಆನಂದ ಪುತ್ರನ್‌, ಡಾ| ವಿಜೇಂದ್ರ, ಮಲ್ಪೆ ಉದ್ಯಮಿ ಸಾಧು ಸಾಲ್ಯಾನ್‌, ರಾಮೋತ್ಸವ ಸಮಿತಿಯ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ  ಪಿ. ವಿಲಾಸ್‌ ನಾಯಕ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮೋತ್ಸವ ಸಮಿತಿ ಸಂಚಾಲಕ ದಿನೇಶ್‌ ಮೆಂಡನ್‌ ಸ್ವಾಗತಿಸಿ ದರು. ಭಾಗ್ಯಶೀÅ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next