Advertisement

Rahul Gandhi; ಪ್ರಧಾನಿ ಮೋದಿಯನ್ನು ಟೀಕಿಸಿ ನನಗೆ ಬೋರ್‌ ಆಗಿದೆ

01:04 AM Nov 04, 2024 | Team Udayavani |

ವಯನಾಡ್‌: ವಯನಾಡ್‌ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸಹೋದರಿ ಪ್ರಿಯಾಂಕಾ ವಾದ್ರಾರೊಂದಿಗೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಜಂಟಿ ಪ್ರಚಾರ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರೆ ನಾಯಕರನ್ನು ಟೀಕಿಸುವ ಬದಲಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ತಮ್ಮ ಸಹೋದರಿ ಮತ್ತು ಕುಟುಂಬದ ಕುರಿತೇ ಮಾತನಾಡಿದ್ದಾರೆ. “ಪ್ರಿಯಾಂಕಾ ಈಗಾಗಲೇ ತಮ್ಮ ಭಾಷಣದಲ್ಲಿ ಮೋದಿ ಕುರಿತು ಮಾತನಾಡಿದ್ದಾರೆ. ಆದರೆ ನಮಗೆಲ್ಲರಿಗೂ ಅವರ ಬಗ್ಗೆ ಕೇಳಿ ಕೇಳಿ ಬೇಸರವಾಗಿದೆ. ಅವರನ್ನು ಟೀಕಿಸಿ ನನಗೂ ಬೋರ್‌ ಆಗಿದೆ. ಆದ್ದರಿಂದ ನಾನು ಅವರನ್ನು ನೆನೆಯುವುದಿಲ್ಲ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next