Advertisement

ಮನುಷ್ಯರನ್ನು ಜ್ಞಾನದ ಮೂಲಕ ಗುರುತಿಸಿ

11:51 AM Dec 19, 2017 | Team Udayavani |

ಕೆಂಗೇರಿ: ಎಲ್ಲ ಧರ್ಮ, ಸಮುದಾಯಗಳ ಹಾಗೂ ಕೆಳ ಹಂತದ ಜನರಿಗೆ ಆಶ್ರಯ ನೀಡಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಎಲ್ಲರ ಸಹಕಾರ ಅಗತ್ಯ ಎಂದು ಕನಕ ಗುರುಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.

Advertisement

ಎಚ್‌.ಗೊಲ್ಲಹಳ್ಳಿಯ ಶ್ರೀ ಕನಕದಾಸ ಯುವಕರ ಸಂಘ ಆಯೋಜಿಸಿದ್ದ ಕನಕದಾಸರ 530ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಪೋಷಕರು, ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು. ಇದರೊಂದಿಗೆ ಮೌಡ್ಯ ಮುಕ್ತ ಸಮಾಜ ನಿರ್ಮಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಮನುಷ್ಯನನ್ನು ಜಾತಿಯಿಂದ ಗುರುತಿಸುವ ಬದಲು ಜ್ಞಾನದ ಮೂಲಕ ಗುರುತಿಸಿ, ಪ್ರತಿಭೆಗೆ ಮನ್ನಣೆ ನೀಡಬೇಕು ಎಂದರು.

ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಬಿ.ಆರ್‌.ಶಿವಮಾದಯ್ಯ ಮಾತನಾಡಿ, ಜಾತಿ, ಧರ್ಮದ ಸಂಘರ್ಷ ಹಾಗೂ ಅಸಮಾನತೆಯಿಂದ ಬಳಲುತ್ತಿರುವ ಇಂದಿನ ಸಮಾಜಕ್ಕೆ ನಾಡಿನ ಹಿರಿಯರು, ಚಿಂತಕರು, ದಾರ್ಶನಿಕರು, ಸಂತರು ನೀಡಿಹೋದ ವಿಚಾರಧಾರೆಗಳನ್ನು ಅರ್ಥ ಮಾಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶಾಸಕ ಎಸ್‌.ಟಿ.ಸೋಮಶೇಖರ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಬಿ.ಎ.ಬಸವರಾಜು, ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಬಿ.ಎಸ್‌.ಶಿವಣ್ಣ, ಪಾಲಿಕೆ ಸದಸ್ಯ ಆರ್ಯ ಶ್ರೀನಿವಾಸ್‌, ಜಿ.ಪಂ ಸದಸ್ಯೆ ಕುಸುಮಾ ಶಿವಮಾದಯ್ಯ, ಎಚ್‌.ಗೊಲ್ಲಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಈರಯ್ಯ, ಎಂ.ನಾರಾಯಣಪ್ಪ, ಎಂ.ವೆಂಕಟೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next