Advertisement

ಐಡಿಯಾ-ವೋಡಾಫೋನ್‌ ವಿಲೀನ: ಇದು ದೇಶದ ಅತೀದೊಡ್ಡ ಟೆಲಿಕಾಂ ಸಂಸ್ಥೆ

11:52 AM Mar 20, 2017 | udayavani editorial |

ಹೊಸದಿಲ್ಲಿ : ಐಡಿಯಾ ಮತ್ತು ವೋಡಾಫೋನ್‌ ಸಂಸ್ಥೆಗಳು ಪರಸ್ಪರ ವಿಲಯನವನ್ನು ಪ್ರಕಟಿಸಿವೆ. ಪರಿಣಾಮವಾಗಿ ಇದು ಭಾರತದ ಅತೀ ದೊಡ್ಡ ಟೆಲಿಕಾಂ ಸೇವಾ ಸಂಸ್ಥೆ ಎನಿಸಿಕೊಂಡಿದೆ. 

Advertisement

ವೋಡಾಫೋನ್‌ ಮತ್ತು ಐಡಿಯಾ ಸಂಸ್ಥೆಗಳ ವಿಲಯನ ಪ್ರಕ್ರಿಯೆಯು ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವಿವಿಧ ನಿನಿಯಂತ್ರಣ ಸಂಸ್ಥೆಗಳಿಂದ ಈ ವಿಲಯನಕ್ಕೆ ಅನುಮೋದನೆ ದೊರಕಬೇಕಿದ್ದು ಅದಕ್ಕೆ ವರ್ಷದ ಕಾಲಾವಕಾಶ ತಗಲಲಿದೆ ಎಂದು ಮೂಲಗಳು ತಿಳಿಸಿವೆ. 

ಈ ವಿಲಯನದೊಂದಿಗೆ ಆದಿತ್ಯ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲರ್‌ ಮತ್ತು ವೋಡಾಫೋನ್‌ ಇಂಡಿಯಾ ಸಂಸ್ಥೆ ದೇಶದಲ್ಲಿ ಅತೀ ದೊಡ್ಡ ದೂರಸಂಪರ್ಕ ಜಾಲ ಹೊಂದಿರುವ ಹಾಗೂ 3ಜಿ/4ಜಿ ಯಲ್ಲಿ ಪ್ಯಾನ್‌ ಇಂಡಿಯಾ ಫ‌ೂಟ್‌ಪ್ರಿಂಟ್‌ ಹೊಂದಿರುವ ಸಂಸ್ಥೆ ಎನಿಸಿದೆ. 

ವೋಡಾಫೋನ್‌ ಪ್ರಕೃತ ಭಾರತದ ಎರಡನೇ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆಯಾದರೆ, ಐಡಿಯಾ ಸೆಲ್ಯುಲರ್‌ 3ನೇ ಅತೀ ದೊಡ್ಡ ಸಂಸ್ಥೆಯಾಗಿದೆ. ಇದು 40 ಕೋಟಿ ಗ್ರಾಹಕರನ್ನು ಹೊಂದಿವೆ. ಎಂದರೇ ದೇಶದ ಪ್ರತೀ ಮೂರನೇ ಗ್ರಾಹಕನು ಈ ಸಂಸ್ಥೆಯ ಗಾಹಕನಾಗಿದ್ದಾನೆ. 

ಪ್ರಕೃತಿ ಭಾರ್ತಿ ಏರ್‌ಟೆಲ್‌ ಸಂಸ್ಥೆಯು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್‌ 1 ಸ್ಥಾನದಲ್ಲಿದ್ದು ದೇಶದ ಅತೀ ದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. 

Advertisement

ಟೆಲಿಕಾಂ ಕ್ಷೇತ್ರಕ್ಕೆ ಈಚೆಗೆ ಭಾರೀ ದೊಡ್ಡ ಮಟ್ಟದಲ್ಲಿ ಪ್ರವೇಶಿಸಿರುವ ರಿಲಯನ್ಸ್‌ ಜಿಯೋ, ಮತ್ತು ಭಾರ್ತಿ ಏರ್‌ಟೆಲ್‌ ಕಂಪೆನಿಗೆ ಕತ್ತುಕತ್ತಿನ ಸ್ಪರ್ಧೆ ನೀಡಲು ವೋಡಾಫೋನ್‌ ಮತ್ತು ಐಡಿಯಾ ಒಗ್ಗೂಡಿರುವುದು ಕುತೂಹಲದ ಸಂಗತಿಯಾಗಿದೆ. 

ಭಾರತ ಸರಕಾರದ ಡಿಜಿಟಲ್‌ ಇಂಡಿಯಾ ಮಹತ್ವಾಕಾಂಕ್ಷೀ ಯೋಜನೆಯನ್ನು ಸಾಕಾರಗೊಳಿಸುವಲ್ಲಿ  ಕಂಪೆನಿಯು ಮಹತ್ತರ ಕಾಣಿಕೆ ನೀಡಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‌ನ ಅಧ್ಯಕ್ಷ ಕುಮಾರ ಮಂಗಲಂ ಬಿರ್ಲಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next