Advertisement

ವಿದ್ಯಾರ್ಥಿಗಳಿಗೆ ಐಎಎಸ್‌ ಉಚಿತ ತರಬೇತಿ ಕೇಂದ್ರ

03:25 PM Dec 19, 2021 | Team Udayavani |

ಹುಣಸಗಿ: ಸುರಪುರ ಕ್ಷೇತ್ರದ ಶಿಕ್ಷಣವಂತ ವಿದ್ಯಾರ್ಥಿಗಳಿಗೆ ಐಎಎಸ್‌ ಹಾಗೂ ಕೆಎಎಸ್‌, ಪಿಎಸ್‌ಐ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುವ ನಿಟ್ಟಿನಲ್ಲಿ ಸಾಧನಾ ಐಎಎಸ್‌ ಉಚಿತ ಕೊಂಚಿಂಗ್‌ ಸೆಂಟರ್‌ ಬೆಂಗಳೂರು-ವಿಜಯನಗರ ಸಹಯೋಗದಲ್ಲಿ ಉಚಿತ ತರಬೇತಿಯನ್ನು ಹುಣಸಗಿಯಲ್ಲಿ ಪ್ರಾರಂಭಿಸಲಾಗುವುದು ಎಂದು ರಾಜ್ಯ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಕೃಷಿ ಮಾತ್ರವಲ್ಲ ಈ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಮತ್ತು ವಿದ್ಯಾರ್ಥಿಗಳು ಉನ್ನತ ಹುದ್ದೆಗಳ ಪಡೆಯಬೇಕೆಂಬ ಆಶಯದೊಂದಿಗೆ ಹಲವು ದಿನಗಳಿಂದ ತರಬೇತಿ ಸಂಸ್ಥೆ ಪ್ರಾರಂಭಿಸಲು ಚಿಂತನೆ ನಡೆಸಲಾಗಿತ್ತು. ಸಾಧನಾ ಸೆಂಟರ್‌ ನಿರ್ದೇಶಕರೊಂದಿಗೆ ಚರ್ಚಿಸಿದಾಗ ಇಲ್ಲಿ ತರಬೇತಿ ಕೊಡಲು ಇಚ್ಚಿಸಿದ್ದಾರೆ. ಸದ್ಯ ಹುಣಸಗಿಯ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ತರಬೇತಿ ನಡೆಸಲು ಸ್ಥಳ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ತರಬೇತಿ ಆರು ತಿಂಗಳ ಉಚಿತವಾಗಿರುತ್ತದೆ. ಸರಕಾರದ ಸಹಾಯಧನ ಇಲ್ಲದೇ ನನ್ನ ತಾಯಿ ತಿಮ್ಮಮ್ಮ ಮೇಮೊರಿಯಲ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ತರಬೇತಿ ಕೊಡಿಸಲಾಗುತ್ತಿದೆ. ಸುರಪುರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇದರ ಪ್ರಯೋಜನ ವಿದ್ಯಾರ್ಥಿಗಳು ಪಡೆದು ಸಾಧನೆ ಮಾಡಿದಾಗ ಶಾಶ್ವತವಾದ ತರಬೇತಿ ಸಂಸ್ಥೆ ಸ್ಥಾಪಿಸಲು ಸುಲಭ ಆಗಲಿದೆ ಎಂದು ಹೇಳಿದರು.

ಸಾಧನಾ ಐಎಎಸ್‌ ಕೊಂಚಿಂಗ್‌ ಸೆಂಟರ್‌ ನಿರ್ದೇಶಕಿ ಡಾ| ಜೋತಿ ಮಾತನಾಡಿ, ಡಿ.20ರಿಂದ ಪ್ರವೇಶ ಅರ್ಜಿ ಸ್ವೀಕರಿಸಲು ಪ್ರಾರಂಭಿಸಿದ್ದು, ತರಬೇತಿ ಪಡೆಯಲು ಆಸಕ್ತ ವಿದ್ಯಾರ್ಥಿಗಳು ಪದವಿಯ ಎಲ್ಲ ಅಂಕಪಟ್ಟಿ ಹಾಗೂ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಎರಡು ಭಾವಚಿತ್ರ ಜತೆಗೆ ಆಧಾರ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲಾತಿಯೊಂದಿಗೆ ಜ.5ರೊಳಗಾಗಿ ಕೊಡೇಕಲ್‌ ಹಾಗೂ ಸುರಪುರ ಶಾಸಕರ ಕಾರ್ಯಾಲಯದಲ್ಲಿ ಹಾಗೂ ಹುಣಸಗಿಯ ತಹಶೀಲ್‌ ಹತ್ತಿರದ ಮಣಿಕಂಠ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜ.9ರಂದು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಗಳ ಪರಿಶೀಲನೆ ನಡೆಸಲಾಗುತ್ತಿದೆ. ನಂತರ ಪ್ರವೇಶ ಪರೀಕ್ಷೆ ಕೂಡ ನಡೆಸಿ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಜ.15ರಂದು ಪ್ರಕಟಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.7899997771, 9686751668, 9900909594, 7026060222, 9071676982 ಸಂಪರ್ಕಿಸಬಹುದಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಮುಖಂಡರಾದ ವೀರೇಶ ಸಾಹುಕಾರ ಚಿಂಚೋಳಿ, ಸಂಗಣ್ಣ ವೈಲಿ, ವಿರುಪಾಕ್ಷಿ ಸ್ಥಾವರಮಠ, ಮೇಲಪ್ಪ ಗುಳಗಿ, ಎಂ.ಎಸ್‌. ಚಂದಾ, ಸಿದ್ದನಗೌಡ ಕರಿಭಾವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next