Advertisement

ಸೀಕ್ರೆಟ್ ಅಕ್ಕನಿಗೆ ಗೊತ್ತಾ?IT ಅಧಿಕಾರಿ ಪುತ್ರನ ಕಿಡ್ನಾಪ್ &ಮರ್ಡರ್

10:46 AM Sep 22, 2017 | Team Udayavani |

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಪುತ್ರನ ಅಪಹರಣ ಪ್ರಕರಣ ಹೊಸ ತಿರುವು ಪಡೆದಿದ್ದು, ಅಪಹರಣಕಾರರು ವಿದ್ಯಾರ್ಥಿ ಶರತ್ ನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಕಳೆದ 9ದಿನಗಳಿಂದ ನಾಪತ್ತೆಯಾಗಿದ್ದ ಶರತ್ ನ ಶವ ಬೆಂಗಳೂರಿನ ರಾಮೋಹಳ್ಳಿ ಕೆರೆ ಬಳಿ ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಐಟಿ ಅಧಿಕಾರಿ ಪುತ್ರ ಶರತ್ (19ವರ್ಷ)ನನ್ನು ಅಪಹರಿಸಿ ಆತನ ವಾಟ್ಸಪ್ ಮೂಲಕವೇ ಶರತ್ ಪೋಷಕರಿಗೆ 50 ಲಕ್ಷ ರೂಪಾಯಿ ಕೊಡುವಂತೆ ಬೆದರಿಕೆ ಸಂದೇಶ ಕಳುಹಿಸಿದ್ದರು.

ನಮ್ಮ ಕುಟುಂಬದಲ್ಲಿ ನಾನು ಮೊದಲ ಟಾರ್ಗೆಟ್, ಹಣ ಕೊಡದಿದ್ದರೆ ಅವರು ನಂತರ ಅಕ್ಕನನ್ನು ಟಾರ್ಗೆಟ್ ಮಾಡುತ್ತಾರೆ. ಇವರು ನೋಡೋದಕ್ಕೆ ತುಂಬಾನೇ ಟೆರರ್ ಆಗಿದ್ದಾರೆ ಎಂದು ಶರತ್ ಪೋಷಕರಿಗೆ ಕಳುಹಿಸಿದ್ದ 2 ವಾಟ್ಸಪ್ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದ.

ಕಿಡ್ನಾಪ್ ಮಾಡಿ ಶರತ್ ನನ್ನು ಕೊಂದು, ಆತನ ಕಾಲಿಗೆ ಕಲ್ಲನ್ನು ಕಟ್ಟಿ ರಾಮೋಹಳ್ಳಿ ಕೆರೆಗೆ ಎಸೆದು ಹೋಗಿದ್ದರು. ಆರೋಪಿಗಳು ಶಿವಮೊಗ್ಗದಲ್ಲಿ ಅಡಗಿಕೊಂಡಿದ್ದರು. ತನಿಖೆಯ ಜಾಡು ಹಿಡಿದು ಹೋಗಿದ್ದ ಪೊಲೀಸರ ಬಲೆಗೆ ವಿಶಾಲ್, ಶಶಿ ಸೇರಿ ಐವರು ಸಿಕ್ಕಿಬಿದ್ದಿದ್ದಾರೆ.

ಕಿಡ್ನಾಪ್ ಪ್ರಕರಣದಲ್ಲಿ ಶರತ್ ಕೂಡಾ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಮತ್ತೊಂದೆಡೆ ತಮ್ಮನ ಕಿಡ್ನಾಪ್ ಅಕ್ಕನಿಗೆ ಗೊತ್ತಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಕಿಡ್ನಾಪ್ ಪ್ಲಾನ್ ಹಿಂದಿನ ಸೂತ್ರಧಾರಿ ವಿಶಾಲ್:

ಐಟಿ ಅಧಿಕಾರಿ ಪುತ್ರ ಶರತ್ ಕಿಡ್ನಾಪ್ ಪ್ರಕರಣದ ಪ್ರಮುಖ ಸೂತ್ರಧಾರಿ ವಿಶಾಲ್ ಎಂದು ತನಿಖೆಯ ವೇಳೆ ಸತ್ಯ ಹೊರಬಿದ್ದಿದೆ. ವಿಶಾಲ್ ಶರತ್ ಪೋಷಕರಿಗೂ ಆತ್ಮೀಯನಾಗಿದ್ದ. ಶರತ್ ನನ್ನು ಕಿಡ್ನಾಪ್ ಮಾಡಿದ ಮೇಲೂ ಪದೇ, ಪದೇ ಶರತ್ ಮನೆಗೆ ಬಂದು ಏನಾಯ್ತು ಅಂಕಲ್, ಶರತ್ ನನ್ನು ಹುಡುಕಿಸಿದ್ರಾ…ದುಡ್ಡು ಹೋದ್ರೆ ಹೋಗಲಿ ಹಣ ಕೊಟ್ಟು ಆತನನ್ನು ರಕ್ಷಿಸಿಕೊಳ್ಳಿ ಎಂದು ಹೇಳುತ್ತಿದ್ದನಂತೆ. ಪದೇ, ಪದೇ ವಿಶಾಲ್ ಬಂದು ವಿಚಾರಿಸುತ್ತಿದ್ದಾಗ ಅನುಮಾನ ಬಂದು ಶರತ್ ಪೋಷಕರು ಪೊಲೀಸರಿಗೆ ದೂರು ನೀಡಿದಾಗ ಸತ್ಯಾಂಶ ಬಯಲಿಗೆ ಬಂದಿತ್ತು. ವಿಶಾಲ್ ಶರತ್ ಅಕ್ಕನ ಕ್ಲಾಸ್ ಮೇಟ್ ಆಗಿದ್ದ. ಕಿಡ್ನಾಪ್ ನಾಟಕವಾಡಿ ಬಂದ ಹಣದಲ್ಲಿ ಹಂಚಿಕೊಳ್ಳುವ ಪ್ಲಾನ್ ಆಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next