Advertisement
ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಮಂಡ್ಯ-1, ಮತ್ತು ಚಿಕ್ಕಬಳ್ಳಾಪುರ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು ನಾಲ್ವ ರು ಸರಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿದ್ದವು. ಈ ನಾಲ್ವರಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 22 ಸ್ಥಳಗಳಲ್ಲಿ ಏಕ ಕಾಲಕ್ಕೆ ಲೋಕಾಯುಕ್ತ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದರು. ಆ ವೇಳೆ ಕೆಜಿಗಟ್ಟಲೆ ಚಿನ್ನ, ದೊಡ್ಡ ಮೊತ್ತದ ಆಸ್ತಿ-ಪಾಸ್ತಿ, ಕಂತೆ ಕಂತೆ ನೋಟುಗಳು ಸೇರಿದಂತೆ ಕೋಟ್ಯಂತ ರ ರೂ. ಮೌಲ್ಯದ ಅಸಮತೋಲನ ಆಸ್ತಿಗಳು ಪತ್ತೆಯಾಗಿವೆ.
-ಎನ್.ಕೆ. ತಿಪ್ಪೇಸ್ವಾಮಿ, ನಿರ್ದೇಶಕ, ನಗರ ಯೋಜನೆ, ಬೆಂಗಳೂರು (3.46 ಕೊಟಿ ರೂ.)
-5 ಸ್ಥಳಗಳಲ್ಲಿ ಶೋಧ. 1 ನಿವೇಶನ, 2 ವಾಸದ ಮನೆ, 7-5 ಎಕರೆ ಕೃಷಿ ಜಮೀನು, ಎಲ್ಲ ಸೇರಿ 2,50,88,000 ರೂ. ಒಟ್ಟು ಸ್ಥಿರ ಆಸ್ತಿ. 8 ಲಕ್ಷ ರೂ. ನಗದು, 58,73,632 ರೂ. ಬೆಲೆ ಬಾಳುವ ಚಿನ್ನಾಭರಣ, 29.10 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 15 ಸಾವಿರ ರೂ. ಬೆಲೆಬಾಳುವ ಇತರ ವಸ್ತುಗಳು ಸೇರಿ 87,98,632 ರೂ. ಚರ ಆಸ್ತಿ.
-ಕೆ. ಮೋಹನ್, ಅಬಕಾರಿ ಅಧೀಕ್ಷಕ, ಅಬಕಾರಿ ಜಂಟಿ ಆಯುಕ್ತರ ಕಚೇರಿ, ಬೆಂಗಳೂರು ದಕ್ಷಿಣ (4,37,84,098 ರೂ.)
– 5 ಸ್ಥಳಗಳಲ್ಲಿ ಶೋಧ. 3 ನಿವೇಶನಗಳು, 2 ವಾಸದ ಮನೆಗಳು, 2-25 ಎಕರೆ ಕೃಷಿ ಜಮೀನು ಸೇರಿ ಒಟ್ಟು ಸ್ಥಿರ ಆಸ್ತಿಯ ಮೌಲ್ಯ 3,22,08,000 ರೂ. ಆಗಿದೆ. 1,17,898 ರೂ. ನಗದು, 44,58,200 ರೂ. ಬೆಲೆ ಬಾಳುವ ಚಿನ್ನಾಭರಣ, 35 ಲಕ್ಷ ರೂ. ಬೆಲೆಬಾಳುವ ವಾಹನಗಳು, 35 ಲಕ್ಷ ರೂ. ಬ್ಯಾಂಕ್ ಎಫ್ಡಿ ಸೇರಿ ಒಟ್ಟು 1,15,76,098 ರೂ. ಮೌಲ್ಯದ ಚರ ಆಸ್ತಿ ಪತ್ತೆ.
-ಮಹೇಶ್, ವ್ಯವಸ್ಥಾಪಕ ನಿರ್ದೇಶಕ, ಕಾವೇರಿ ನೀರಾವರಿ ನಿಗಮ ನಿಯಮಿತ, ಬೆಂಗಳೂರು (6.89 ಕೋಟಿ ರೂ.)
-7 ಸ್ಥಳಗಳಲ್ಲಿ ಶೋಧ. 25 ನಿವೇಶನಗಳು, 1 ವಾಸದ ಮನೆ, 25 ಎಕರೆ ಕೃಷಿ ಜಮೀನು ಸೇರಿ ಒಟ್ಟು 4,76,33,956 ರೂ. ಮೌಲ್ಯದ ಸ್ಥಿರ ಆಸ್ತಿ. 1,82,284 ರೂ. ನಗದು, 15 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 25 ಲಕ್ಷ ರೂ. ಮೌಲ್ಯದ ವಾಹನಗಳು, 1,71,05,000 ರೂ. ಬೆಲೆಬಾಳುವ ಇತರೆ ವಸ್ತುಗಳು ಸೇರಿ ಒಟ್ಟು 2,12,87,284 ರೂ. ಮೌಲ್ಯದ ಚರ ಆಸ್ತಿ.
-ಎಂ.ಸಿ. ಕೃಷ್ಣವೇಣಿ, ಹಿರಿಯ ಭೂ ವಿಜ್ಞಾನಿ, ಮಂಗಳೂರು (11.93 ಕೋಟಿ ರೂ.)
-5 ಸ್ಥಳಗಳಲ್ಲಿ ಶೋಧ. 3 ನಿವೇಶನಗಳು, ಯಲಹಂಕದಲ್ಲಿ 1 ಫ್ಲ್ಯಾಟ್, ನಿರ್ಮಾಣ ಹಂತದಲ್ಲಿರುವ 1 ವಾಣಿಜ್ಯ ಸಂಕೀರ್ಣ, 26 ಎಕರೆ ಕೃಷಿ ಜಮೀನು (ಕಾಫಿ ಪ್ಲಾಂಟೇಷನ್) ಸೇರಿ ಒಟ್ಟು 10,41,38,286 ರೂ. ಮೌಲ್ಯದ ಸ್ಥಿರ ಆಸ್ತಿ. 56,450 ರೂ. ನಗದು, 66,71,445 ರೂ. ಬೆಲೆ ಬಾಳುವ ಚಿನ್ನಾಭರಣ, 60 ಲಕ್ಷ ರೂ. ಬೆಲೆಬಾಳುವ ವಾಹನಗಳು, 24.40 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 1,51,67,895 ರೂ. ಮೌಲ್ಯದ ಚರ ಆಸ್ತಿ.