Advertisement

“ಐ ಲವ್‌ ಯೂ’ಚಿತ್ರಕ್ಕಾಯ್ತು ಟೆಸ್ಟ್‌ ಶೂಟ್‌ 

09:00 PM May 09, 2018 | |

ಆರ್‌.ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಅವರು “ಐ ಲವ್‌ ಯೂ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಹೊಸದೇನಲ್ಲ. ಬುಧವಾರ ಆ ಚಿತ್ರಕ್ಕೆ ಟೆಸ್ಟ್‌ ಶೂಟ್‌ ಆಗಿದ್ದು, ಉಪೇಂದ್ರ ಅವರು ಸಿನಿಮಾದಲ್ಲಿ ಹೇಗೆ ಕಾಣುತ್ತಾರೆ ಎಂಬ ಸ್ಯಾಂಪಲ್‌ ಒಂದು ಬಿಡುಗಡೆಯಾಗಿದೆ. “ಐ ಲವ್‌ ಯೂ’ ಎಂಬ ಹೆಸರೇ ಹೇಳುವಂತೆ ಇದೊಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ.

Advertisement

ಹಾಗಾದರೆ ಉಪೇಂದ್ರ ಈ ಚಿತ್ರದಲ್ಲಿ, ಈ ವಯಸ್ಸಲ್ಲಿ ಲವರ್‌ ಬಾಯ್‌ ಆಗುತ್ತಿದ್ದಾರಾ ಎಂದು ನೀವು ಕೇಳಬಹುದು. ಮೂಲಗಳ ಪ್ರಕಾರ, ಇದು “ಎ’, “ಉಪೇಂದ್ರ’ ಹಾಗೂ “ಪ್ರೀತ್ಸೆ’ ಶೈಲಿಯ ಲವ್‌ಸ್ಟೋರಿಯಾಗಿದ್ದು, ಉಪೇಂದ್ರ ಅವರ ಪಾತ್ರ ಕೂಡಾ ವಿಭಿನ್ನವಾಗಿದೆ ಎನ್ನಲಾಗಿದೆ. ಈ ಮೂರು ಶೈಲಿಯ ಜೊತೆಗೆ ಚಂದ್ರು ಅವರ ಶೈಲಿ ಇರಲಿದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

“ಐ ಲವ್‌ ಯೂ’ ಚಿತ್ರದ ಮುಹೂರ್ತ ಮೇ 18 ರಂದು ನಡೆಯಲಿದೆ. ಅಂದಹಾಗೆ, ಈ ಚಿತ್ರ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ ತಯರಾಗುತ್ತಿದೆ. ಈಗಾಗಲೇ ಉಪೇಂದ್ರ ತೆಲುಗಿನಲ್ಲಿ ಹಲವು ಸಿನಿಮಾ ಮಾಡಿದ್ದಾರೆ. ಇನ್ನು, ಆರ್‌.ಚಂದ್ರು ಕೂಡಾ “ಚಾರ್‌ಮಿನಾರ್‌’ ರೀಮೇಕ್‌ ಅನ್ನು ತೆಲುಗಿನಲ್ಲಿ ನಿರ್ದೇಶಿಸಿದ್ದಾರೆ. ಹಾಗಾಗಿ, ಇಬ್ಬರಿಗೂ ತೆಲುಗು ಚಿತ್ರರಂಗ ಹೊಸದಲ್ಲ.

ಇನ್ನು, ಆರ್‌.ಚಂದ್ರು ಹಾಗೂ ಉಪೇಂದ್ರ ಈ ಚಿತ್ರದ ಮೂಲಕ ಎರಡನೇ ಬಾರಿಗೆ ಜೊತೆಯಾಗುತ್ತಿದ್ದಾರೆ. ಈಗಾಗಲೇ ಇವರಿಬ್ಬರ ಕಾಂಬಿನೇಶನ್‌ನಲ್ಲಿ “ಬ್ರಹ್ಮ’ ಎಂಬ ಚಿತ್ರ ಬಂದಿತ್ತು. ಈಗ “ಐ ಲವ್‌ ಯೂ’ ಮೂಲಕ ಮತ್ತೆ ಒಂದಾಗಿದ್ದಾರೆ. ಚಿತ್ರಕ್ಕೆ ನಾಯಕಿ ಸೇರಿದಂತೆ ತಾಂತ್ರಿಕ ವರ್ಗ ಇನ್ನಷ್ಟೇ ಅಂತಿಮವಾಗಬೇಕಿದೆ. ತೆಲುಗು ಚಿತ್ರರಂಗದ ರಾಜ್‌ಪ್ರಭಾಕರ್‌ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next