Advertisement

50ರ ಸಂಭ್ರಮದಲ್ಲಿ “ಐ ಲವ್‌ ಯು’

05:47 PM Aug 05, 2019 | Lakshmi GovindaRaj |

ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಂದ್ರು ತಮ್ಮ ತಂಡ ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಲು ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಚಿತ್ರಕ್ಕೆ ದುಡಿದ ಹಾಗೂ ಚಿತ್ರದ ಯಶಸ್ಸಿಗೆ ಕಾರಣರಾದವರಿಗೆ ನೆನಪಿನ ಕಾಣಿಕೆ ನೀಡಲಾಯಿತು.

Advertisement

ಬೆಂಗಳೂರು ಪೊಲೀಸ್‌ ಆಯುಕ್ತರಾದ ಭಾಸ್ಕರ್‌ ರಾವ್‌, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಆನಂದ ಗುರೂಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಟ ಉಪೇಂದ್ರ, ಸೋನುಗೌಡ, ಗುರುಕಿರಣ್‌, ಕಿರಣ್‌ ತೋಟಂಬೈಲ್‌ ಸೇರಿದಂತೆ ಚಿತ್ರತಂಡದ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next