Advertisement

ಬಿಜೆಪಿ ಈಗ ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ : ಶತ್ರುಘ್ನ ಸಿನ್ಹಾ

12:25 PM Oct 03, 2018 | udayavani editorial |

ಹೊಸದಿಲ್ಲಿ : “ನಾನು ಪಕ್ಷಕ್ಕಿಂತಲೂ ಭಾರತೀಯ ಜನತೆಗೆ ಸೇರಿದವನಾಗಿದ್ದೇನೆ’ ಎಂದು ಅತೃಪ್ತ ಬಿಜೆಪಿ ಹಿರಿಯ ನಾಯಕ, ಮಾಜಿ ಬಾಲಿವುಡ್‌ ನಟ, ಶತ್ರುಘ್ನ ಸಿನ್ಹಾ ಹೇಳಿದ್ದಾರೆ. 

Advertisement

“ಭಾರತೀಯ ಜನತಾ ಪಕ್ಷ ಈಗ ಒನ್‌ ಮ್ಯಾನ್‌ ಶೋ, ಟೂ ಮೆನ್‌ ಆರ್ಮಿ’ ಎಂಬಂತಾಗಿದೆ ಎಂದು ಶತ್ರುಘ್ನ ಸಿನ್ಹಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್‌ ಶಾ ಅವರನ್ನು ಪರೋಕ್ಷವಾಗಿ ಗುರಿ ಇರಿಸಿ ಕಟಕಿಯಾಡಿದ್ದಾರೆ. 

ತನ್ನ ಸಂಸದೀಯ ಕ್ಷೇತ್ರವಾಗಿರುವ ಪಟ್ನಾ ಸಾಹಿಬ್‌ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶತ್ರುಘ್ನ ಸಿನ್ಹಾ, “ನಾನು ಯಾವುದೇ ಪಕ್ಷಕ್ಕೆ ನಿಷ್ಠನಾಗಿರುವ ಮೊದಲು ಭಾರತೀಯ ಜನತೆಗೆ ನಿಷ್ಠನಾಗಿದ್ದೇನೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next