ಹೈದರಾಬಾದ್: ನಗರದ ಆದಿಲಾಬಾದ್ ಪ್ರದೇಶದಲ್ಲಿನ ಸರ್ಕಾರಿ ಶಾಲೆಯ ಹರ್ಷಿತ್ ವರ್ಮ ಮತ್ತು ಕೆ. ರುದ್ರ ಎನ್ನುವ ವಿದ್ಯಾರ್ಥಿಗಳಿಬ್ಬರು ಸಾವಯವ ಚಾಕ್ ಪೀಸ್‌ಗಳನ್ನು ತಯಾರಿಸಿ ಅಪಾರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಈಗ ದೇಶಾದ್ಯಂತ ಬಳಸಲಾಗುವ ಜಿಪ್ಸಂ ಚಾಕ್ ಪೀಸ್ ಗಳು ಹಲವು ರಾಸಾಯನಿಕಗಳನ್ನು ಹೊಂದಿರುತ್ತವೆ. ಅವುಗಳಿಂದ ಹೊರಬೀಳುವ ಧೂಳಿನ ನಿರಂತರ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಹಾಗೂ ಕಣ್ಣಿನ ಉರಿಯೂತದಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಈ ಕಾರಣಕ್ಕಾಗಿಯೇ ತಾವು ಅಕ್ಕಿ ಹಿಟ್ಟು, ನಿಂಬೆ ರಸ, ಬೇವು, ಜೇಡಿಮಣ್ಣಿನಿಂದ ಚಾಕ್‌ಪೀಸ್ ತಯಾರಿಸಿರುವುದಾಗಿ, ಇವುಗಳಲ್ಲಿ ಕರ್ಪೂರ, ಸಂಪಂಗಿ ಹೂವು, ನೀಲಗಿರಿ ಎಣ್ಣೆ, ಶ್ರೀಗಂಧವನ್ನೂ ಸೇರಿಸಬಹುದು. ಇದರಿಂದ ಶಾಲಾ ಕೊಠಡಿಯ ಘಮವೂ ಉತ್ತಮವಾಗಿರುತ್ತದೆ ಎನ್ನುತ್ತಾರೆ ಈ ಪೋರರು.
ಇದನ್ನೂ ಓದಿ:ಸಚಿವ ಸ್ಥಾನದಿಂದ ಕೈ ಬಿಡುವ ಬಗ್ಗೆ ಮಾಧ್ಯಮದಲ್ಲಷ್ಟೆ ಚರ್ಚೆ : ಶಶಿಕಲಾ ಜೊಲ್ಲೆ
ತಮ್ಮ ಈ ಚಾಕ್ ಪೀಸ್ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲೂ ಬಳಕೆಯಾಗಬೇಕು ಎನ್ನುವ ಆಸೆ ಇವರಿಗಿದೆಯಂತೆ. ಗಮನಾರ್ಹ ಸಂಗತಿಯೆಂದರೆ, ಈ ಚಾಕ್ ಪೀಸ್ ಗಳನ್ನು ಅವರ ಶಾಲೆಯಲ್ಲಿ ಈಗ ಶಿಕ್ಷಕರು ಬಳಸಲಾರಂಭಿಸಿದ್ದು, ಮತ್ತಷ್ಟು ಬದಲಾವಣೆ ಮಾಡುವ ಮೂಲಕ ಜಿಪ್ಸಂ ಚಾಕ್ ಪೀಸ್‌ಗೆ ಸವಾಲೊಡ್ಡುವಂತೆ ಈ ಸಾವಯವ ಚಾಕ್ ಪೀಸ್ ಅನ್ನು ಅಭಿವೃದ್ಧಿಪಡಿಸಬಹುದು ಎನ್ನುವ ಭರವಸೆ ಶಿಕ್ಷಕರದ್ದು.