Advertisement
ಸೆಪ್ಟೆಂಬರ್ 17, 1948 ರಂದು ನಿಜಾಮ್ ಆಳ್ವಿಕೆಯಲ್ಲಿ ಹಿಂದಿನ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡ ಸಂದರ್ಭವನ್ನು ಗುರುತಿಸಲು ಕೇಂದ್ರ ಸರ್ಕಾರದ ‘ಹೈದರಾಬಾದ್ ವಿಮೋಚನಾ ದಿನ’ದ ಅಧಿಕೃತ ಆಚರಣೆಯಲ್ಲಿ ಶಾ ಅವರು ಮಾತನಾಡಿ, ”ತೆಲಂಗಾಣದಲ್ಲಿ ಇಷ್ಟು ವರ್ಷಗಳ ಕಾಲ ‘ಹೈದರಾಬಾದ್ ವಿಮೋಚನಾ ದಿನ’ವನ್ನು ಅಧಿಕೃತವಾಗಿ ಆಚರಿಸದಿರುವುದು ದುರದೃಷ್ಟಕರ ಸಂಗತಿ. ಈ ದಿನವನ್ನು ಸ್ಮರಿಸಲು ನಿರ್ಧರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
Related Articles
Advertisement
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುತ್ಥಳಿ ಗೆ ಗೌರವ ನಮನ ಸಲ್ಲಿಸಿದರು. ಸಮಾರಂಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಕರ್ನಾಟಕ ಸಾರಿಗೆ ಸಚಿವ ಬಿ ಶ್ರೀರಾಮುಲು ಭಾಗಿಯಾಗಿದ್ದರು.