Advertisement

ಕುಡಿವ ನೀರಿನ ಸಮಸ್ಯೆ ಪರಿಶೀಲನೆ

04:17 PM Jun 06, 2020 | Naveen |

ಹೂವಿನಹಿಪ್ಪರಗಿ: ಸಾರ್ವಜನಿಕರಿಗೆ ಕುಡಿವ ನೀರಿನ ಸಮಸ್ಯೆ ಆಗಬಾರದೆಂದು ಸರ್ಕಾರ ಬೋರ್‌ವೆಲ್‌ ಕೊರೆಸಿದ್ದು ಪರಸ್ಪರ ಹೊಂದಾಣಿಕೆಯಿಂದ ನೀರು ಪಡೆಯಿರಿ ತಾಪಂ ಇಒ ಭಾರತಿ ಚಲುವಯ್ಯ ಹೇಳಿದರು.

Advertisement

ಕಾನ್ನಾಳ ಗ್ರಾಮದಲ್ಲಿ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ ಪಕ್ಕದಲ್ಲಿ ಖಾಸಗಿ ವ್ಯಕ್ತಿ ಕಟ್ಟಿಗೆಗಳನ್ನು ಹಾಕಿ ಜನತೆಗೆ ತೊಂದರೆ ನೀಡುತ್ತಿದ್ದು ಕುಡಿವ ನೀರಿಗೆ ಸಮಸ್ಯೆ ಎದುರಾಗಿದೆ ಎಂಬ ಗ್ರಾಮಸ್ಥರ ಮನವಿ ಮೇರೆಗೆ ಸ್ಥಳಕ್ಕೆ ಬೇಟಿ ನೀಡಿ ಅಹವಾಲು ಆಲಿಸಿ ಅವರು ಮಾತನಾಡಿದರು. ನಂತರ ಖಾಸಗಿ ವ್ಯಕ್ತಿ ಮನೆಗೆ ತೆರಳಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ತಾಲೂಕಾಡಳಿತ ಬೋರ್‌ವೆಲ್‌ ಹಾಕಿ ಜನತೆಗೆ ಸೌಲಭ್ಯ ಕಲ್ಪಿಸಿದಾಗ ತಕರಾರು ಮಾಡಬಾರದು ಎಂದು ಹೇಳಿದರು. ಆಗ ಖಾಸಗಿ ವ್ಯಕ್ತಿ ಮಾತಾನಾಡಿ, ಜನರು ಬೋರ್‌ವೆಲ್‌ ಪಕ್ಕ ಗಲೀಜು ಮಾಡುತ್ತಿದ್ದಾರೆ. ಅಲ್ಲದೆ ಜಾಗೆ ಕುರಿತಾಗಿ ದಾವೆಯಿದೆ ಎಂದಾಗ ತಾಪಂ ಇಒ ಭಾರತಿ ಚಲುವಯ್ಯ, ನ್ಯಾಯಾಲಯದಲ್ಲಿ ದಾವೆ ಇತ್ಯರ್ಥವಾದ ನಂತರ ಗ್ರಾಮಸ್ಥರು ಹಾಗೂ ತಾವು ಆದೇಶ ಪ್ರಕಾರ ನಡೆದುಕೊಳ್ಳಿ. ಇದೀಗ ಕುಡಿವ ನೀರಿನ ಸಮಸ್ಯೆಗೆ ಗ್ರಾಮಸ್ಥರು ಹಾಗೂ ತಮ್ಮ ಕುಟುಂಬ ಮಧ್ಯೆ ಪರಸ್ಪರ ಹೊಂದಾಣಿಕೆ ಅಗತ್ಯ ಎಂದರು.

ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಗ್ರಾಮಸ್ಥರಿಗೆ ತೊಂದರೆ ನೀಡುವ ಉದ್ದೇಶದಿಂದ ಕಟ್ಟಿಗೆಗಳನ್ನು ಹಾಕುತ್ತಿದ್ದು ಕೂಡಲೇ ತೆರವುಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದಾಗ ಗ್ರಾಮಸ್ಥರು ಧ್ವನಿಗೂಡಿಸಿದರು. ಉಮೇಶ ವಾಲೀಕಾರ, ದಾವಲಸಾಬ ಚಪ್ಪರಬಂದ, ಮೈಬೂಬಸಾಬ ಚಪ್ಪರಬಂದ, ದಾವಲಮಲಿಕ ಚಪ್ಪರಬಂದ, ರಾಜೇಸಾಬ ಬಾಗೇವಾಡಿ, ಸಂಗಪ್ಪ ಸಜ್ಜನ, ಚಂದಪ್ಪ ಕಲಬುರ್ಗಿ, ಮುದಕಪ್ಪ ಚಲವಾದಿ, ಶಿವಯ್ಯ ಮಠಪತಿ, ನಾಗನಗೌಡ ಬಿರಾದಾರ, ಯಲಗೂರದಪ್ಪ ಕಲಬುರ್ಗಿ, ರಾಮನಗೌಡ ಮೇಟಿ, ಅಲ್ಲಾಬಿ ಚಪ್ಪರಬಂದ, ಇಮಾಂಬಿ ಚಪ್ಪರಬಂದ, ಗುರಾಣಬಿ ಚಪ್ಪರಬಂದ, ಮಹಾದೇವಿ ಯರಝೇರಿ, ಶಂಕ್ರಮ್ಮ ಹೂಗಾರ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next