Advertisement

ಅಧಿಕಾರಿಗಳಿಂದ ನರೇಗಾ ಕಾಮಗಾರಿ ಪರಿಶೀಲನೆ

05:10 PM Apr 26, 2020 | Naveen |

ಹೂವಿನಹಡಗಲಿ: ತಾಲೂಕಿನ ನರೇಗಾ ಪ್ರಗತಿ ಕಾಮಗಾರಿಯನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ರಾಜ್ಯ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು.

Advertisement

ತಾಲೂಕಿನ ಇಟಗಿ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳಾದ ಎಸ್‌. ರೋಹಿತ್‌, ತೇಜಸ್‌ ಚಂದ್ರ, ಗೌತಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಅಧಿಕಾರಿಗಳು ಕೂಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಉಂಟಾಗಿತ್ತು. ಆದರೆ ನರೇಗಾ ಕಾಮಗಾರಿ ಆಸರೆಯಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕಾಮಗಾರಿ ನಿರ್ವಹಿಸುವುದಾಗಿ ತಿಳಿಸಿದರು.

ನರೇಗಾ ಕೋಶಾಧಿಕಾರಿ ಅಂಬರೀಶ್‌, ನಟರಾಜ್‌, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್‌. ಸೋಮಶೇಖರ, ಗ್ರಾಪಂ ಅಧ್ಯಕ್ಷ ಕೊಟ್ರಗೌಡ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next