Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 7 ದಿನಗಳ ಕಾಲ ನಡೆಯಲಿರುವ ದತ್ತಮಾಲಾ ಅಭಿಯಾನದಲ್ಲಿ, ನ. 7ರಂದು ದತ್ತ ಭಕ್ತರು ದತ್ತಮಾಲೆ ಧರಿಸಲಿದ್ದಾರೆ. ನ. 10ರಂದು ದತ್ತ ದೀಪೋತ್ಸವ, ನ. 12ರಂದು ಪಡಿ ಸಂಗ್ರಹ (ಭಿûಾಟನೆ), ನ. 13ರಂದು ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ, ದತ್ತಪೀಠದಲ್ಲಿ ಹೋಮ, ಹವನ, ಧರ್ಮಸಭೆ ನಡೆಯಲಿದೆ.
ಶ್ರೀರಾಮ ಸೇನೆ ದತ್ತಪೀಠ ವಿಚಾರವಾಗಿ 18 ವರ್ಷಗಳ ಸು ಧೀರ್ಘ ಹೋರಾಟ ನಡೆಸುತ್ತಿದೆ. ನ್ಯಾಯಾಲಯ ಹಿಂದೂ ಅರ್ಚಕರ ನೇಮಕ ಮಾಡುವಂತೆ ಆದೇಶಿಸಿದೆ. ಸದನ ಸಮಿತಿ ವರದಿ ನೀಡಿದೆ. ಆದರೆ, ಹಿಂದೂ ಅರ್ಚಕರ ನೇಮಕ ಮಾಡಲು ರಾಜ್ಯ ಸರಕಾರ ಮೀನಮೇಷ ಎಣಿಸುತ್ತಿದೆ. ನ. 13ರ ಒಳಗೆ ಹಿಂದೂ ಅರ್ಚಕರನ್ನು ನೇಮಕ ಮಾಡದಿದ್ದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು. ಅಹಿತಕರ ಘಟನೆ ಸಂಭವಿಸಿದರೆ ರಾಜ್ಯ ಸರಕಾರವೇ ಹೊಣೆ. ನಿರ್ಲಕ್ಷ್ಯ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದರು.