ಹುಣಸೂರು: ಪ್ರಯಾಣಿಕರಿಗೆ ಆಶ್ರಯ ಕಲ್ಪಿಸುತ್ತಿದ್ದ ಬಸ್ ತಂಗುದಾಣವನ್ನೇ ಹೊಡೆದು ಉರುಳಿಸಿದ ಘಟನೆ ತಾಲೂಕಿನ ಮುತ್ತಾರಾಯನಹೊಸಳ್ಳಿ ಗೇಟ್‌ನಲ್ಲಿ ನಡೆದಿದೆ.
ಹುಣಸೂರು-ವಿರಾಜಪೇಟೆ ರಾಜ್ಯಹೆದ್ದಾರಿ ಬದಿಯಲ್ಲಿರುವ ತಾಲೂಕಿನ ಮುತ್ತುರಾಯನಹೊಹಳ್ಳಿ ಗೇಟ್‌ನಲ್ಲಿದ್ದ ಬಸ್ ತಂಗುದಾಣವನ್ನು ಶುಕ್ರವಾರ ರಾತ್ರಿ ಕೆಡವಿಹಾಕಿದ್ದು, ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೆದ್ದಾರಿಯಿಂದ ಊರಿನೊಳಗೆ ಹೋಗಲು ಸುಮಾರು ಒಂದು ಕಿಲೋಮೀಟರ್ ದೂರ ಇರುವುದರಿಂದ ಗೇಟ್ ಬಳಿ ಮಳೆ-ಬಿಸಿಲಿನಿಂದ ಆಶ್ರಯಪಡೆಯುವ ಸಲುವಾಗಿ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಲೋಕೋಪಯೋಗಿ ಇಲಾಖೆವತಿಯಿಂದ ಹೆದ್ದಾರಿ ನಿರ್ಮಿಸುವ ವೇಳೆ ತಂಗುದಾಣ ನಿರ್ಮಿಸಲಾಗಿತ್ತು.
ಈ ಬಸ್ ನಿತಂಗುದಾಣವನ್ನು ಶುಕ್ರವಾರ ರಾತ್ರಿ ಸುಮಾರು ೧೨ ಗಂಟೆ ಸಮಯದಲ್ಲಿ ಜೆ.ಸಿ.ಬಿ. ಮೂಲಕ ಬಸ್ ನಿಲ್ದಾಣವನ್ನು ಕೆಡವಿ ಹಾಕಿದ್ದು, ಸೂಕ್ರ ಕ್ರಮ ಕೈಗೊಂಡು ನಿಲಾಣವನ್ನು ಪುನರ್ ನಿರ್ಮಿಸಬೇಕೆಂದು ಗ್ರಾಮದ ಮುಖಂಡ ಹಾಗೂ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಗದೀಶ್ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಸ್ ತಂಗುದಾಣ ಪಿಡಬ್ಲ್ಯೂಡಿ ಇಲಾಖೆಯ ಜಾಗದಲಿದ್ದು, ತಂಗುದಾಣ ಸಂಪೂರ್ಣ ಕೆಡವಿ ಹಾಕಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈಗಾಗಲೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿರುವುದಾಗಿ ಲೋಕೋಪಯೋಗಿ ಇಲಾಖೆ ಎಇಇ ಬೋಜರಾಜ್ ಪತ್ರಿಕೆಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಹುಣಸೂರು: ಬೆಳ್ಳಂಬೆಳಗ್ಗೆ ಚಿರತೆ ದಾಳಿಗೆ ಐದು ಮೇಕೆ ಬಲಿ, ರೈತರಲ್ಲಿ ಆತಂಕ