Advertisement
1. ಬೇಸಿಗೆಯಲ್ಲಿ ಎರಡು ಬಾರಿ ಸ್ನಾನ ಮಾಡಿದರೆ ಒಳಿತು.2. ಬೆವರಿನ ಸಮಸ್ಯೆ ಇರುವವರು ಹೆಚ್ಚು ನೀರು ಕುಡಿಯಬೇಕು.
3. ಸ್ನಾನದ ನಂತರ ಸೌತೆಕಾಯಿಯ ತುಣುಕಿನಿಂದ ಮೈ ಉಜ್ಜಿಕೊಂಡರೆ, ವಾಸನೆ ಕಡಿಮೆಯಾಗುತ್ತದೆ. ಕೆಟ್ಟ ವಾಸನೆ ಬೀರುವ ಬ್ಯಾಕ್ಟೀರಿಯಾಗಳ ನಾಶಕ್ಕೆ ಸೌತೆಕಾಯಿ ಸಹಕಾರಿ.
4. ಸ್ನಾನದ ನಂತರ, ಅಡುಗೆ ಸೋಡಾವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಕಂಕುಳು ಮತ್ತು ಇತರ ಭಾಗಗಳಿಗೆ ಸವರಿಕೊಂಡರೆ ಬೆವರಿನ ಸಮಸ್ಯೆ ಕಾಡುವುದಿಲ್ಲ.
5. ಅರ್ಧ ಹೋಳು ಲಿಂಬೆಯನ್ನು ಕಂಕುಳುಗೆ ಹಚ್ಚಿ ಸ್ನಾನ ಮಾಡಿ.
6. ಸ್ನಾನದ ನೀರಿರುವ ಬಕೆಟ್‌ಗೆ ಲಿಂಬೆ ಹಣ್ಣು ಹಿಂಡಿದರೂ ಆದೀತು.
7. ಮಸಾಲೆಯುಕ್ತ ಮತ್ತು ಹೆಚ್ಚು ಕೆಫಿನ್ ಅಂಶವಿರುವ ಆಹಾರ ಸೇವನೆಯಿಂದ ಬೆವರಿನ ದುರ್ಗಂಧ ಹೆಚ್ಚುತ್ತದೆ. ಬೇಸಿಗೆಯಲ್ಲಿ ಇಂಥ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ.
8. ಪ್ರತಿದಿನವೂ ಶುಭ್ರವಾದ ಬಟ್ಟೆಗಳನ್ನೇ ಧರಿಸಿ.
9. ಬೇವಿನ ಎಲೆಯ ರಸ ಬೆರೆಸಿದ ನೀರಿನಿಂದ ಸ್ನಾನ ಮಾಡಿ.
10. ಬಿಗಿಯಾದ ಉಡುಪು ಧರಿಸದೆ, ದೇಹಕ್ಕೆ ಹಿತವೆನಿಸುವ ಹತ್ತಿಯ ಬಟ್ಟೆ ಧರಿಸಿ.