Advertisement
ಗೂಗಲ್ ಯಾರಿಗೆ ತಾನೆ ಗೊತ್ತಿಲ್ಲ? ಗೂಗಲ್ ಎಂದರೇನು ಎಂದು ಗೊತ್ತಿಲ್ಲದಿದ್ದವರೂ ಹಾಗೆಂದರೇನು ಎಂದು ತಿಳಿಯಲು ಗೂಗಲ್‌ನಲ್ಲೇ ಸರ್ಚ್ ಮಾಡುವಷ್ಟರ ಮಟ್ಟಿಗೆ ಇವತ್ತು “ಗೂಗಲ್’ ಎಂಬ ಹೆಸರು ಮನೆಮಾತಾಗಿದೆ. ಗೂಗಲ್‌ನ ಸರ್ಚ್ ಎಂಜಿನ್, ಇಮೇಲ್, ವೆಬ್ ಬ್ರೌಸರ್ ಕ್ರೋಮ್ ಮತ್ತು ವಿವಿಧ ಆನ್‌ಲೈನ್ ಟೂಲ್‌ಗಳೆಲ್ಲವೂ ಅತೀ ಅನ್ನುವಷ್ಟು ಜನಪ್ರಿಯವೇ. ಇವೆಲ್ಲವನ್ನೂ ನಿತ್ಯವೂ ಹತ್ತಾರು ಬಾರಿ ಬಳಸುತ್ತೇವೆ. ಹಲವು ಕೆಲಸಗಳಿಗೆ ಈ ಸೇವೆಗಳನ್ನೇ ನಾವು ಅವಲಂಬಿಸಿದ್ದೇವೆ. ಆದರೆ, ಒಂದು ಅಂಶವನ್ನು ಎಲ್ಲರೂ ಗಮನಿಸಿರಬಹುದು. ಗೂಗಲ್‌ನ ಯಾವ ಸೇವೆಯನ್ನು ಬಳಸಿದರೂ ಅದಕ್ಕೆ ನಾವ್ಯಾರೂ ದುಡ್ಡು ಕೊಡುವುದಿಲ್ಲ. ಗೂಗಲ್‌ನ ಎಲ್ಲ ಸೇವೆಯೂ ಉಚಿತವಾಗಿಯೇ ನಮಗೆ ಸಿಗುತ್ತಿದೆ. ಹಾಗಾದರೆ, ನಮಗೆ ಉಚಿತ ಸೇವೆ ನೀಡುವ ಗೂಗಲ್‌ಗೆ ಕಾಸು ಎಲ್ಲಿಂದ ಬರುತ್ತದೆ?
ಗೂಗಲ್‌ನ ಒಟ್ಟು ಆದಾಯ 2017ರಲ್ಲಿ 110 ಬಿಲಿಯನ್ ಡಾಲರ್. ಅಂದರೆ, 7.50 ಲಕ್ಷ ಕೋಟಿ ರೂ.! ಈ ಆದಾಯದಲ್ಲಿ ಬಹುತೇಕ ಭಾಗ ಗೂಗಲ್‌ನ ಆಡ್‌ವರ್ಡ್ಸ್‌ನಿಂದಲೇ ಲಭ್ಯವಾಗುತ್ತದೆ ಎಂದರೆ ನೀವು ನಂಬಲೇಬೇಕು. ಹಣಕಾಸು ಮಾಹಿತಿಯಿಂದ ಹಿಡಿದು ಸ್ಥಳೀಯ ಹವಾಮಾನದವರೆಗೆ ಹಲವು ವಿಷಯದ ಬಗ್ಗೆ ಮಾಹಿತಿ ಬೇಕೆಂದು ಗೂಗಲ್‌ನಲ್ಲಿ ಸರ್ಚ್ ಮಾಡುತ್ತೀರಲ್ಲ. ಆಗ ಗೂಗಲ್ ತನ್ನದೇ ಆದ ಅಲ್ಗೊàರಿದಂ ಆಧರಿಸಿ ಸರ್ಚ್ ರಿಸಲ್ಟ್ ಅನ್ನು ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ. ನೀವು ಏನನ್ನು ಹುಡುಕುತ್ತಿದ್ದೀರೋ ಅದಕ್ಕೆ ನಿಖರ ಉತ್ತರ ನೀಡಲು ಗೂಗಲ್ ಆ ಅಲ್ಕೋರಿದಂ ಬಳಸಿ ಪ್ರಯತ್ನಿಸುತ್ತದೆ. ಈ ವೇಳೆ ನೀವು ಗಮನಿಸಿರಬಹುದು, ರಿಸಲ್ಟ್‌ಗಳ ಜೊತೆಗೆ ಆಡ್‌ವರ್ಡ್ ಸಲಹೆ ಮಾಡಿದ ಒಂದಷ್ಟು ಪುಟಗಳನ್ನು ಇದು ತೋರಿಸುತ್ತದೆ.
Related Articles
Advertisement
ಯಾವುದೇ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತ ಅಥವಾ ಫೋಟೋ ಹುಡುಕುತ್ತ, ಅದೇ ಸಂದರ್ಭದಲ್ಲಿ ಜಾಹೀರಾತನ್ನೂ ಗಮನಿಸಿ, ಕುತೂಹಲದಿಂದಲೇ ಅದರ ಮೇಲೆ ಕ್ಲಿಕ್ ಮಾಡಿದರೆ ಆಗ ಗೂಗಲ್‌ಗೆ ಹಣ ಉತ್ಪಾದನೆಯಾಗುತ್ತದೆ. ಜಹೀರಾತು ನೀಡಿದವರು ಗೂಗಲ್‌ಗೆ ಇದೇ ಆಧಾರದಲ್ಲಿ ಹಣ ನೀಡುತ್ತಾರೆ. ಈ ಹಣ ಮೊತ್ತ ಕೆಲವು ಸೆಂಟ್‌ಗಳಿಂದ 50 ಡಾಲರ್‌ವರೆಗೂ ಇರಬಹುದು. ವಿಮೆ, ಸಾಲಗಳು ಮತ್ತು ಇತರ ಹಣಕಾಸು ಸೇವೆಗಳಂತೂ ಈ ಸೇವೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿವೆ.
ಬೇರೆ ವೆಬ್‌ಸೈಟ್‌ಗಳಿಂದಲೂ ಬರುತ್ತೆ ಆದಾಯ ನಾವು ದುಡ್ಡು ಖರ್ಚು ಮಾಡಿ ಒಂದು ವೆಬ್‌ಸೈಟ್ ಮಾಡಿದರೂ ಅದರಿಂದ ಗೂಗಲ್ ಆದಾಯ ಗಳಿಸುತ್ತದೆ. ನಮ್ಮ ವೆಬ್‌ಸೈಟ್‌ನಲ್ಲಿ ಗೂಗಲ್ ತನ್ನ ಜಾಹೀರಾತುಗಳನ್ನು ಪ್ರದರ್ಶಿಸುತ್ತದೆ. ಜಾಹೀರಾತು ಕೊಟ್ಟವರಿಂದ ಹಣ ವಸೂಲಿ ಮಾಡಿ, ಜಾಹೀರಾತು ಪ್ರದರ್ಶಿಸಿದ ವೆಬ್‌ಸೈಟ್ ಮಾಲೀಕರಿಗೆ ಸ್ವಲ್ಪ ಮೊತ್ತದ ಹಣ ನೀಡುತ್ತದೆ. ಇದು ಕೂಡ ಗೂಗಲ್‌ಗೆ ದೊಡ್ಡ ಜಾಹೀರಾತು ಆದಾಯದ ಮೂಲ. ಬಹುತೇಕ ಸುದ್ದಿ ವೈಬ್‌ಸೈಟ್‌ಗಳು ಗೂಗಲ್ ಜಾಹೀರಾತಿನ ಮೇಲೆಯೇ ಅವಲಂಬಿಸಿದೆ. ಇವುಗಳಿಗೆ ಗೂಗಲ್ ಪ್ರದರ್ಶಿಸುವ ಜಾಹೀರಾತಿನ ಹಣವೇ ಆದಾಯದ ಮೂಲವಾಗಿರುತ್ತದೆ. ಇಲ್ಲೂ ಕೂಡ ಒಂದು ಕ್ಲಿಕ್‌ಗೆ ಇಷ್ಟು ಮೊತ್ತ ಎಂಬುದು ನಿಗದಿಯಾಗುತ್ತದೆ. ಅದೇ ಪ್ರಕಾರ, ವೆಬ್‌ಸೈಟ್ ಮಾಲೀಕರಿಗೆ ಗೂಗಲ್ ಕಂಪನಿ, ಹಣ ನೀಡುತ್ತದೆ. ಇದಕ್ಕಾಗಿ ಆ್ಯಡ್‌ಸೆನ್ಸ್ ನೆಟ್‌ವರ್ಕ್ ಅನ್ನು ಕಂಪನಿ ರೂಪಿಸಿದೆ. ವೆಬ್‌ಸೈಟ್ ಮಾಲೀಕರು ಈ ಆ್ಯಡ್‌ಸನ್ಸ್‌ಗೆ ನೋಂದಾಯಿಸಿಕೊಂಡರೆ ಸಾಕು. ತನ್ನ ಜಾಹೀರಾತುಗಳನ್ನು ಗೂಗಲ್ ಪ್ರದರ್ಶಿಸುತ್ತದೆ. ಗೂಗಲ್‌ಗೆ ಇದು ಎಷ್ಟು ದೊಡ್ಡ ಆದಾಯದ ಮೂಲವೆಂದರೆ 2018ರ 1ನೇ ತ್ತೈಮಾಸಿಕದಲ್ಲಿ ಗೂಗಲ್‌ಗೆ ಬಂದ ಒಟ್ಟು 31.1 ಬಿಲಿಯನ್ ಡಾಲರ್ ಆದಾಯದಲ್ಲಿ 26.6 ಬಿಲಿಯನ್ ಡಾಲರ್ ಆದಾಯ ಈ ಮೂಲದಿಂದಲೇ ಬಂದಿದೆ ! ಜಾಹೀರಾತಿನ ಹೊರತಾಗಿ ಉಳಿದೆಲ್ಲ ನಷ್ಟವೇ!
ಇಂಟರ್‌ನೆಟ್‌ನ ಹಲವು ಕ್ಷೇತ್ರಗಳಲ್ಲಿ ಗೂಗಲ್ ತನ್ನ ಮೂಗು ತೂರಿಸಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಗೂಗಲ್ ಸ್ವತಃ ಅಭಿವೃದ್ಧಿಪಡಿಸಿದ ಆ್ಯಪ್‌ಗ್ಳನ್ನು ಹುಡುಕಿದರೆ ನಮಗೆ ನೂರಾರು ಸಿಗುತ್ತವೆ. ಆದರೆ ಈ ಎಲ್ಲ ಪ್ರಯತ್ನಗಳಿಗೂ ಬಹುತೇಕ ನಷ್ಟದಲ್ಲೇ ನಡೆಯುತ್ತಿವೆ. ಪ್ಲೇಸ್ಟೋರ್‌ನಲ್ಲಿ ಪ್ರತಿ ಆ್ಯಪ್ ಅಪ್‌ಲೋಡ್ ಮಾಡಲು, 2,500 ರೂ. ಪಾವತಿ ಮಾಡಬೇಕಿರುತ್ತದೆ. ಅಷ್ಟಾದರೂ ಪ್ಲೇ ಸ್ಟೋರ್‌ನಲ್ಲಿ ಸದ್ಯ 33 ಲಕ್ಷ ಆ್ಯಪ್‌ಗ್ಳಿವೆ. ಇವು ಗೂಗಲ್‌ನ ಒಟ್ಟು ಆದಾಯದ ಅತ್ಯಂತ ಕಡಿಮೆ ಪ್ರಮಾಣದ್ದು. ಇನ್ನು ಮೀಡಿಯಾ, ಕೌÉಡ್ ಕಂಪ್ಯೂಟಿಂಗ್ ಬ್ಯೂಸಿನೆಸ್, ಕ್ರೋಮ್‌ಕಾಸ್ಟ್, ಕ್ರೋಮ್ ಬುಕ್, ಆಂಡ್ರಾಯ್ಡಗಳೆಲ್ಲವೂ ಆದಾಯವನ್ನೇನೋ ಗಳಿಸುತ್ತಿವೆ. ಆದರೆ ಜಾಹೀರಾತಿನ ಆದಾಯಕ್ಕೆ ಹೋಲಿಸಿದರೆ ಇದು ನಗಣ್ಯ. ಮೋಟೊರೋಲಾ ನಷ್ಟ
ಗೂಗಲ್ ಇತಿಹಾಸದಲ್ಲೇ ಅತಿ ದೊಡ್ಡ ನಷ್ಟವಾಗಿದ್ದು ಮೊಟೊರೊಲಾ ಒಪ್ಪಂದದ ವಿಷಯದಲ್ಲಿ. 2011ರಲ್ಲಿ, ಮೊಟೊರೊಲಾ ಸ್ಮಾರ್ಟ್‌ಫೋನ್ ತಯಾರಿಕೆ ಕಂಪನಿ 12.5 ಬಿಲಿಯನ್ ಡಾಲರ್‌ಗೆ ಗೂಗಲ್ ಖರೀದಿಸಿತ್ತು. ಆದರೆ ನಂತರ ಎರಡೇ ವರ್ಷದಲ್ಲಿ ಕೇವಲ 3 ಬಿಲಿಯನ್ ಡಾಲರ್‌ಗೆ ಲೆನೊವೋಗೆ ಮಾರಿತ್ತು. ಒಂಟ್ಟು ನಷ್ಟ 9 ಬಿಲಿಯನ್ ಡಾಲರ್ ! 2011ರ ಹೊತ್ತಿಗಾಗಲೇ ಗೂಗಲ್ ಅತಿ ದೊಡ್ಡ ಆಂಡ್ರಾಯ್ಡ ಮಾರ್ಕೆಟ್ ಆಗಿ ಬೆಳೆದಿತ್ತು. ತನ್ನ ಕೈಯಲ್ಲೇ ಆಂಡ್ರಾಯ್ಡ ಆಪರೇಟಿಂಗ್ ಸಿಸ್ಟಂ ಕೂಡ ಇತ್ತು. ಆದರೆ ಮೊಬೈಲ್ ಹಾರ್ಡ್‌ವೇರ್ ವಹಿವಾಟಿಗೆ ಕೈ ಹಾಕಿರಲಿಲ್ಲ. ಮೊಟೊರೊಲಾ ಖರೀದಿಸಿದರೆ, ಸುಲಭವಾಗಿ ಈ ಲಾಭ ಗಳಿಸಬಹುದು ಎಂದು ಗೂಗಲ್ ಲೆಕ್ಕಾಚಾರ ಹಾಕಿತ್ತಾದರೂ, ಈ ಯೋಜನೆ ಕೆಲಸಕ್ಕೆ ಮಾಡಲಿಲ್ಲ. ಈ ಒಪ್ಪಂದದಿಂದ ಆದ ಒಂದೇ ಅನುಕೂಲವೆಂದರೆ, ಸುಮಾರು 17 ಸಾವಿರ ಪೇಟೆಂಟ್‌ಗಳು ಗೂಗಲ್ ಕೈಗೆ ಸಿಕ್ಕವು. – ಕೃಷ್ಣ ಭಟ್