ವುಹಾನ್: ವಿಶ್ವಕ್ಕೇ ತಲೆನೋವಾದ ಕೋವಿಡ್-19 ವೈರಸ್ ಮಾರಿಯ ಹಾವಳಿ ಅದರ ಜನ್ಮಸ್ಥಳ ವುಹಾನ್‌ನಲ್ಲಿ ಕಡಿಮೆಯಾದರೂ ಸಂಪೂರ್ಣವಾಗಿ ಹೋಗಿಲ್ಲ. ಮತ್ತೆ ಮತ್ತೆ ಕೆಲವು ಪ್ರಕರಣಗಳು ಗೋಚರಿಸುತ್ತಲೇ ಇವೆ. ಇದು ಮತ್ತೆ ಜನಸಮುದಾಯಕ್ಕೆ ಹರಡುವ ಭೀತಿಯನ್ನೂ ಸೃಷ್ಟಿಸಿದೆ.
ಆದ್ದರಿಂದ ವುಹಾನ್‌ನಲ್ಲಿರುವ ಎಲ್ಲ ಸಾರ್ವಜನಿಕರಿಗೆ ಚೀನ ಪರೀಕ್ಷೆಗೆ ಉದ್ದೇಶಿಸಿದ್ದು 1.1 ಕೋಟಿ ಜನರ ಪರೀಕ್ಷೆ ನಡೆಸಿದೆ. ಮೇ ತಿಂಗಳಲ್ಲಿ ಸಮರೋಪಾದಿಯಲ್ಲಿ ಈ ಟೆಸ್ಟಿಂಗ್ ನಡೆದಿದೆ.
ಪ್ರತಿ ಮನೆಗೆ ಚೀನದ ಆರೋಗ್ಯ ಕಾರ್ಯಕರ್ತರು ತೆರಳಿದ್ದು, ಕೋವಿಡ್ ಟೆಸ್ಟಿಂಗ್ ನಡೆಸದ ಪ್ರತಿಯೊಬ್ಬರಿಗೂ ಟೆಸ್ಟಿಂಗ್‌ಗೆ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಟೆಸ್ಟಿಂಗ್‌ಗೆ ಒಳಪಡಿಸಿಲ್ಲ. ಈ ಟೆಸ್ಟಿಂಗ್‌ನಿಂದಾಗಿ ಸುಮಾರು 300 ಪ್ರಕರಣಗಳು ಪತ್ತೆಯಾಗಿವೆ. ಆದರೆ ಇವರಿಗೆ ಕೋವಿಡ್‌ನ ಯಾವುದೇ ಲಕ್ಷಣಗಳು ಇರಲಿಲ್ಲ. ಅವರನ್ನೆಲ್ಲ ಪ್ರತ್ಯೇಕ ವಾಸದಲ್ಲಿ ಇರಿಸಲಾಗಿದೆ.
ಚೀನಾದಲ್ಲಿ ಕೋವಿಡ್ ರೀತಿಯ ರೋಗ ಲಕ್ಷಗಣಗಳಿದ್ದರೆ ಅದನ್ನು ಕೋವಿಡ್ ಪೊಸೆಟಿವ್ ಎಂದು ಅಲ್ಲಿನ ಸರಕಾರ ಪರಿಗಣಿಸುವುದಿಲ್ಲ. ಆದರೆ ಇಂತಹವರನ್ನು ಪ್ರತ್ಯೇಕವಾಗಿರಿಸಲಾಗುತ್ತದೆ.
ವುಹಾನ್‌ನಲ್ಲಿ ಪ್ರಕರಣ ವರದಿಯಾದ ಬಳಿಕ ಚೀನಾದಲ್ಲಿ ಒಟ್ಟು 83 ಸಾವಿರ ಪ್ರಕರಣಗಳು ವರದಿಯಾಗಿದ್ದು 4694 ಮಂದಿ ಸಾವಿಗೀಡಾಗಿದ್ದರು.