Advertisement

ಹಾಸ್ಟೆಲ್‌ಗ‌ಳ ದುಸ್ಥಿತಿಯ ವರದಿ ಬಿಡುಗಡೆ

08:20 AM Mar 10, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂಲಕ ನಡೆಯುತ್ತಿರುವ ಹಾಸ್ಟೆಲ್‌ ಗಳ ಸ್ಥಿತಿಗತಿ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಹಾಸ್ಟೆಲ್‌ ಗಳಲ್ಲಿ ಸೌಲಭ್ಯಗಳ ಕೊರತೆ, ಊಟ-ಉಪಾ ಹಾರದ ಅವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲಿದೆ. 

Advertisement

ಬಿಜೆಪಿಯ ಎಸ್‌ಸಿ, ಎಸ್‌ಟಿ ಮತ್ತು ಓಬಿಸಿ ಮೋರ್ಚಾದ ತಂಡಗಳು ರಾಜ್ಯದ ಎಲ್ಲಾ ಜಿಲ್ಲೆಗಳ 1,080 ಪರಿಶಿಷ್ಟ ಜಾತಿ, ಪಂಗಡದ
ಮತ್ತು 1,510 ಹಿಂದುಳಿದ ವರ್ಗಗಳ ಹಾಸ್ಟೆಲ್‌ ಗಳಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ಮಾಡಿ 86 ಪುಟಗಳ ಈ ವರದಿ ಸಿದಟಛಿಪಡಿಸಿದ್ದು, ಬೆಂಗಳೂರು ಸೇರಿ ರಾಜ್ಯದ 15 ಕಡೆ ಏಕಕಾಲದಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.

ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಇರುವ 2,590 ಹಾಸ್ಟೆಲ್‌ಗ‌ಳಲ್ಲಿ 1,727 ಹಾಸ್ಟೆಲ್‌ಗ‌ಳು ಸ್ವಂತ
ಕಟ್ಟಡದಲ್ಲಿದ್ದು, 760 ಹಾಸ್ಟೆಲ್‌ಗ‌ಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹಾಸ್ಟೆಲ್‌ ಕಟ್ಟಡ ಬಾಡಿಗೆಗಾಗಿಯೇ ಸರ್ಕಾರ ವಾರ್ಷಿಕ 25.89 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ 740 ಹೆಣ್ಣು ಮಕ್ಕಳ ಹಾಸ್ಟೆಲ್‌ಗ‌ಳ ಪೈಕಿ ಶೇ. 88ರಷ್ಟು ಹಾಸ್ಟೆಲ್‌ಗ‌ಳಲ್ಲಿ ಸ್ಯಾನಿಟರಿ ಪ್ಯಾಡ್‌ ಸೌಲಭ್ಯವಿಲ್ಲ. 352 ಹಾಸ್ಟೆಲ್‌ಗ‌ಳಲ್ಲಿ ಅಗತ್ಯ ಸ್ನಾನಗೃಹ ಮತ್ತು ಶೌಚಾಲಯಗಳಿಲ್ಲ. 286 ಹಾಸ್ಟೆಲ್‌ಗ‌ಳಲ್ಲಿ ಹಗಲು ಮತ್ತು 106 ಹಾಸ್ಟೆಲ್‌ ಗಳಲ್ಲಿ ರಾತ್ರಿ ಕಾವಲುಗಾರರ ವ್ಯವಸ್ಥೆಯಿಲ್ಲ. 162 ಹಾಸ್ಟೆಲ್‌ಗ‌ಳಿಗೆ ರಕ್ಷಣಾ ಗೋಡೆಯೇ ಇಲ್ಲ. 207 ಹಾಸ್ಟೆಲ್‌ಗ‌ಳಲ್ಲಿ 5 ಮಂದಿ ವಿದ್ಯಾರ್ಥಿನಿಯರಿರಬೇಕಾದ ಕೊಠಡಿಗಳಲ್ಲಿ 30ಕ್ಕಿಂತ ಹೆಚ್ಚು ಮಂದಿ ಇರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಧ್ಯಯನ ವರದಿ  ಬಿಡುಗಡೆ ಮಾಡಿ, ದಲಿತ ಮಕ್ಕಳ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ನಡೆಯುತ್ತಿದೆ. ಈ ಬಗ್ಗೆ ಯಾವುದೇ ತನಿಖೆ ನಡೆಸದೆ ಹಗರಣ ಮುಚ್ಚಿಹಾಕಲಾಗುತ್ತಿದೆ ಎಂದು ವರದಿಯಲ್ಲಿ
ಹೇಳಲಾಗಿದೆ. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ಹಾಸ್ಟೆಲ್‌ಗ‌ಳ ಲೋಪವನ್ನು ಈಗಿನ ಸರ್ಕಾರ ಸರಿಪಡಿಸುತ್ತದೆ ಅಥವಾ ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತದೆ ಎಂಬ ನಿರೀಕ್ಷೆ ನಮಗಿಲ್ಲ. ಮುಂದೆ ಬಿಜೆಪಿ ಸರ್ಕಾರ ಬಂದ ಮೇಲೆ ವರದಿಯಲ್ಲಿ ಕಂಡುಬಂದಿರುವ ಲೋಪಗಳ ಬಗ್ಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲು ಈ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದೆ. 
● ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ರಾಷ್ಟ್ರಪತಿ ಆಳ್ವಿಕೆಗೆ ಆಗ್ರಹ
ಬೆಂಗಳೂರು:
ಹಾಡಹಗಲೇ ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ ಹತ್ಯೆ ಯತ್ನ ಪ್ರಕರಣ ಸೇರಿ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯದಲ್ಲಿ
ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವಂತೆ ರಾಜ್ಯಪಾಲರನ್ನು ಕೋರಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂ ತ್ರಿಸಲು ಸಾಧ್ಯವಾಗದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಆದರೆ,
ಭಂಡತನದಿಂದ ಅವರು ರಾಜೀನಾಮೆ ನೀಡುತ್ತಾರೆಂಬ ವಿಶ್ವಾಸವಿಲ್ಲ. ಹಾಗೆಂದು ಈ ಸರ್ಕಾರದ ಅವಧಿ ಇನ್ನು ಕೆಲವೇ ದಿನ ಎಂದು
ಸುಮ್ಮನಾದರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಲಿದೆ. ಆದ್ದರಿಂದ ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹತ್ಯೆ, ಹತ್ಯೆ ಯತ್ನ, ಅಮಾಯಕರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಇಡೀ ರಾಜ್ಯ ಗೂಂಡಾಗಳ ಸಾಮ್ರಾಜ್ಯವಾಗಲಿದೆ. ಅದಕ್ಕೆ ಅವಕಾಶ ಮಾಡಿಕೊಡದೆ ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.

ಇತ್ತ ರಾಜ್ಯದ ಜನರಿಗೆ ರಕ್ಷಣೆ ನೀಡಲು ಸಾಧ್ಯವಾಗದ ಸಿಎಂ ಸಿದ್ದರಾಮಯ್ಯ ಇನ್ನೊಂದೆಡೆ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್‌ ಅವರಿಗೆ ಐಶಾರಾಮಿ ಸೌಲಭ್ಯ ಒದಗಿಸುವಂತೆ ಹಿಂದೆ ಜೈಲಿನ ಮುಖ್ಯಸ್ಥರಾಗಿದ್ದ ಸತ್ಯನಾರಾಯಣ್‌ ಅವರಿಗೆ ಸೂಚಿಸಿದ್ದರು ಎಂಬಲ್ಲಿಗೆ ಅವರ ಆಡಳಿತ ವೈಖರಿ ಯಾವ ರೀತಿ ಇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರಕರಣದಲ್ಲಿ 
ಮುಖ್ಯಮಂತ್ರಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next