ಹೊಸನಗರ: ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಬಸವಳಿದಿದ್ದ ಚಾಲಕ ಮತ್ತು ಇನ್ನಿತರ ವೃತ್ತಿ ಮಾಡುವವರಿಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ. ತಾಲೂಕಿನ ಮೂಡುಗೊಪ್ಪ ಗ್ರಾಪಂ ವ್ಯಾಪ್ತಿಯ ದುಬ್ಟಾರ್‌ತಟ್ಟಿಯಲ್ಲಿ ಚಾಲಕರು ಸೇರಿದಂತೆ ಇತರೆ ಅಂಗಡಿ ಮುಂಗ್ಗಟ್ಟು ಹೊಂದಿದ್ದ ಹಲವಾರು ಜನರು ಕೆಲಸವೂ ಇಲ್ಲದೇ..ಸಂಬಳವೂ ಸಿಗದೆ ಪರದಾಡುವಂತಾಗಿತ್ತು.
ಈ ಹಿನ್ನೆಲೆಯಲ್ಲಿ ಅಂತಹ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಪಂ ಖಾತ್ರಿ ಯೋಜನೆಯಡಿ ಕೆಲಸ ನೀಡಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ದುಬ್ಟಾರತಟ್ಟಿಯ ಸಿದ್ದಪ್ಪಶೆಟ್ಟಿ ಕೆರೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಚಾಲಕರು ಮತ್ತು ಇತರೆ ವೃತ್ತಿಯ 17 ಜನರು ಕಾರ್ಯನಿರ್ವಹಿಸಿ ಗಮನ ಸೆಳೆದರು.
ಉದ್ಯೋಗಖಾತ್ರಿ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಮಾಡಲು ಅವಕಾಶವಿದ್ದು, ಅದರನ್ವಯ ಕೆಲಸ ನೀಡಲಾಗಿದೆ. ಕೋವಿಡ್ ಹರದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.
ವಿಶ್ವನಾಥ,
ಪಿಡಿಒ