Advertisement

Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ

11:43 PM Dec 03, 2024 | Team Udayavani |

ಪಡುಬಿದ್ರಿ: ಕಾಂಜರಕಟ್ಟೆಯ ಕಂಪೆನಿಯೊಂದರಲ್ಲಿ ಸೇಲ್ಸ್‌ ಮ್ಯಾನೇಜರ್‌ ಆಗಿದ್ದ ಕಾರ್ಕಳ ನಿವಾಸಿ ಪ್ರಶಾಂತ್‌ ಕಾಮತ್‌ (52) ನ. 28ರಿಂದ ನಾಪತ್ತೆಯಾಗಿದ್ದವರು ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ಪತ್ತೆಯಾಗಿದ್ದಾರೆ.

Advertisement

ಪಡುಬಿದ್ರಿ ಪೊಲೀಸರು ಅವರನ್ನು ಕಾರ್ಕಳದಲ್ಲಿನ ಅವರ ಮನೆಯವರಿಗೆ ಒಪ್ಪಿಸಿದ್ದಾರೆ. ಪ್ರಶಾಂತ್‌ ಕಾಮತ್‌ ಅವರು ಕಾಂಜರಕಟ್ಟೆಯ ಕಚೇರಿಗೆ ಬಂದು ಮಂಗಳೂರು ಕಚೇರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದವರು ನಿಗೂಢವಾಗಿ ನಾಪತ್ತೆಯಾಗಿದ್ದರು. ತನಗೆ ಕೆಲಸ ಒತ್ತಡ ಜಾಸ್ತಿಯಾಗಿತ್ತು. ಅದನ್ನು ನಿಭಾಯಿಸಲು ಆಗದೆ ತಾನು ಹೊಸನಗರದತ್ತ ಹೋಗಿದ್ದುದಾಗಿ ಪೊಲೀಸರಲ್ಲಿ ಅವರು ತಿಳಿಸಿದ್ದಾರೆ. ಅವರು ನಂದಿಕೂರು ಕೈಗಾರಿಕ ಪ್ರದೇಶದಲ್ಲಿ ಈ ಹಿಂದೆ ಉದ್ಯಮವೊಂದನ್ನೂ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next