Advertisement

LIC ‘ಬಿಮಾ ಸಖಿ ಯೋಜನೆ’: 2 ಲಕ್ಷ ಮಹಿಳೆಯರಿಗೆ ಉದ್ಯೋಗ

01:44 AM Dec 10, 2024 | Team Udayavani |

ಪಾಣಿಪತ್‌: ಎಲ್‌ಐಸಿ ಅಡಿಯಲ್ಲಿ “ಬಿಮಾ ಸಖಿ ಯೋಜನೆ’ಗೆ ಹರಿಯಾಣದ ಪಾಣಿಪತ್‌ನಲ್ಲಿ ಪ್ರಧಾನಿ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಮುಂದಿನ 3 ವರ್ಷಗಳಲ್ಲಿ 2 ಲಕ್ಷ ಮಹಿಳೆಯರನ್ನು ವಿಮಾ ಏಜೆಂಟ್‌ಗಳಾಗಿ ನೇಮಿಸಲು ಗುರಿ ಹೊಂದಲಾಗಿದೆ. 10ನೇ ತರಗತಿ ಉತ್ತೀರ್ಣರಾದ 18-70 ವರ್ಷದ ಮಹಿಳೆಯರ ಸಶಕ್ತೀಕರಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ. ನೇಮಕಗೊಂಡವರಿಗೆ 3 ವರ್ಷ ತರಬೇತಿ ನೀಡಲಾಗುತ್ತದೆ. ಮೊದಲ ವರ್ಷ ಪ್ರತೀ ತಿಂಗಳು 7,000 ರೂ. ನೀಡಲಾಗುತ್ತದೆ. 2 ನೇ ವರ್ಷ ಪ್ರತೀ ತಿಂಗಳು 6,000 ರೂ., 3ನೇ ವರ್ಷ ಪ್ರತೀ ತಿಂಗಳು 5000 ರೂ. ಸ್ಟೈಪೆಂಡ್‌ ನೀಡಲಾ ಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಅವರು ಏಜೆಂಟ್‌ ಆಗಬಹುದು. ಬಳಿಕ ಅವರನ್ನು ಡೆವಲಪ್‌ಮೆಂಟ್‌ ಆಫೀಸರ್‌ ಹುದ್ದೆಗೆ ನೇಮಕ ಮಾಡಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next