Advertisement

ಹೊಸಾಡು ಹೊಳೆಗೆ ಕಾಲು ಸಂಕ : ಕಾಮಗಾರಿ ಆರಂಭ

11:03 PM May 15, 2020 | Sriram |

ಕುಂದಾಪುರ: ಪ್ರತೀ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿ ದಾಟುವ ತಾಪತ್ರಯದಿಂದ ಹೊಸಾಡು ನಾಗರೀಕರು ಮುಕ್ತರಾಗಲಿದ್ದಾರೆ. ಈಗಾಗಲೇ ಹೊಸದಾಗಿ ಕಾಲ ಸಂಕ ಮಂಜೂರಾಗಿ, ಕಾಮಗಾರಿಯೂ ಆರಂಭಗೊಂಡಿದ್ದು, ಭರದಿಂದ ಸಾಗುತ್ತಿದೆ. ಮಳೆಗಾಲಕ್ಕೂ ಮುನ್ನ ಜನ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.

Advertisement

ಹೊಸಾಡು ಹೊಳೆಗೆ ಹೊಸದಾದ ಕಾಲು ಸಂಕ ನಿರ್ಮಾಣಕ್ಕೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರ ಮುತುವರ್ಜಿಯಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿಯಲ್ಲಿ 10 ಲಕ್ಷ ರೂ. ಮಂಜೂರಾಗಿತ್ತು. ಕಾಲೊ¤àಡು ಗ್ರಾಮ ಬೋಳಂಬಳ್ಳಿ – ಹೊಸಾಡು ನಡುವೆ ಹಾದು ಹೋಗುವ ಹೊಸಾಡು ಹೊಳೆಯನ್ನು ದಾಟಿ ಹೋಗಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಬೋಳಂಬಳ್ಳಿ, ಹೊಸಾಡು, ಕಾಡಿನಹೊಳೆ, ಮೈನ್‌ಮಕ್ಕಿ, ಕಡಾಟೆ, ಕೆಂಜಿ, ಕೊಡಾಲು ಪರಿಸರದ ಜನ ಕಾಲ್ತೋಡಿಗೆ ಹೋಗಬೇಕಿದ್ದರೆ ಇದೇ ಸಂಕದಾಟಿ ಹೋಗಬೇಕು.

ನದಿ ದಾಟಲು ಸರಿಯಾದ ಕಾಲು ಸಂಕದ ವ್ಯವಸ್ಥೆಯಿಲ್ಲದ ಕಾರಣ ಬೋಳಂಬಳ್ಳಿ ಶಾಲೆಗೆ, ಅಂಗನವಾಡಿಗೆ ಹೋಗುವ ಮಕ್ಕಳು ತುಂಬಾ ಸಂಕಷ್ಟ ಅನುಭವಿಸುತ್ತಿದ್ದರು. ಹೊಸಾಡು ಹೊಳೆಯನ್ನು ದಾಟಿ, ಕಾಲಸಂಕವನ್ನು ಬಳಸಿ ಪ್ರತಿದಿನ 1,500 ಹೆಚ್ಚು ಜನರು ಸಂಚರಿಸುತ್ತಾರೆ. ಹೊಸಾಡು ಪರಿಸರದಲ್ಲಿ 40ಕ್ಕೂ ಅಧಿಕ ಕುಟುಂಬಗಳಿವೆ. ಈಗ ಹೊಸದಾಗಿ ನಿರ್ಮಾಣವಾಗುತ್ತಿರುವ ಕಾಲು ಸಂಕದಿಂದಾಗಿ ಮಕ್ಕಳು, ನಾಗರಿಕರಿಗೆ ಅನುಕೂಲವಾದಂತಾಗಿದೆ.

ಮಳೆಗಾಲಕ್ಕೂ ಮುನ್ನ ಪೂರ್ಣ ಸಾಧ್ಯತೆ
ಹೊಸಾಡು ವಾಸಿಗಳು ಮಳೆಗಾಲದಲ್ಲಿ ಅಪಾಯಕಾರಿ ಕಾಲುಸಂಕ ದಾಟಿ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವುದು ಕಣ್ಣಾರೆ ಕಂಡಿದ್ದು, ಶಾಶ್ವತ ಕಾಲು ಸಂಕ ಅತ್ಯವಶ್ಯವಾಗಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಯಾವುದಾದರೂ ಅನುದಾನದ ಮೂಲಕ ಕಾಲುಸಂಕ ಮಾಡುವ ನಿರ್ಧಾರಕ್ಕೆ ಬರಲಾಯಿತು. 10 ಲಕ್ಷ ರೂ. ವೆಚ್ಚದಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ಕಾಲುಸಂಕ ನಿರ್ಮಾಣವಾಗುತ್ತಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸಿ, ಮಳೆಗಾಲದೊಳಗೆ ಸಂಚಾರಕ್ಕೆ ಬಿಟ್ಟುಕೊಡುವಂತೆ ಸೂಚಿಸಿದ್ದೇನೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ , ಶಾಸಕರು, ಬೈಂದೂರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next